ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ವೆಬ್ ಸಿರೀಸ್‍ಗೆ ಟೈಟಲ್ ಫಿಕ್ಸ್

ಮುಂಬೈ: ಉತ್ತರ ಪ್ರದೇಶ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಸ್ಟೋರಿಯನ್ನು ವೆಬ್ ಸಿರೀಸ್ ಮಾಡಲು ಬಾಲಿವುಡ್ ನಿರ್ಮಾಪಕರೊಬ್ಬರು ಮುಂದಾಗಿದ್ದು, ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ.

ಬೀದಿ ರೌಡಿಯಾಗಿ ಜೀವನ ಆರಂಭಿಸಿದ್ದ ದುಬೆ ರಾಜಕೀಯ ನಾಯಕರ ಬೆಂಬಲದೊಂದಿಗೆ ಗ್ಯಾಂಗ್‍ಸ್ಟರ್ ಆಗಿ ಬೆಳೆದಿದ್ದು ಹೇಗೆ ಎಂಬ ಬಗ್ಗೆ ವೆಬ್ ಸಿರೀಸ್ ಮಾಡಲು ನಿರ್ಮಾಪಕ ಮನೀಶ್ ವಾತ್ಸಲ್ಯ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕ್ರೈಂ ಆಧರಿಸಿ ಹಲವು ವೆಬ್ ಸಿರೀಸ್‍ಗಳು ನಿರ್ಮಾಣ ಮಾಡಿ ಯಶಸ್ಸು ಪಡೆದಿದ್ದಾರೆ. ಪರಿಣಾಮ ಈಗ ವಿಕಾಸ್ ದುಬೆ ಗ್ಯಾಂಗ್‍ಸ್ಟರ್ ಜೀವನದ ಮೇಲೆ ಸಿರೀಸ್ ನಿರ್ಮಾಣ ಮಾಡಲು ಗುರಿ ಇಟ್ಟಿದ್ದಾರೆ.

ಈಗಾಗಲೇ ಕ್ರೈಂ ಥ್ರಿಲ್ಲರ್ ಸಿನಿಮಾಗೆ ‘ಹನಕ್’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದೆ. ಮನೀಶ್ ವಾತ್ಸಲ್ಯ, ವಿಕಾಸ್ ದುಬೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದು, ಸಿರೀಸ್‍ನಲ್ಲಿ ವಿಕಾಸ್ ದುಬೆಯನ್ನು ಖಳನಾಯಕನಾಗಿ ತೋರಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೇ ಪ್ರಮುಖ ನಟನನ್ನು ವಿಕಾಸ್ ದುಬೆ ಪಾತ್ರಕ್ಕೆ ಆಯ್ಕೆ ಮಾಡಲಾಗುವುದು ಎಂದಿದ್ದಾರೆ.

ರಾಜಕೀಯ ನಾಯಕರ ಬೆಂಬಲದೊಂದಿಗೆ ಹಲವು ಕ್ರೈಂಗಳಲ್ಲಿ ಭಾಗಿಯಾಗಿದ್ದ ವಿಕಾಸ್ ದುಬೆ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದೆ. ಕೊಲೆ, ಸುಲಿಗೆ, ಭೂ ಕಬ್ಜ, ಕಿಡ್ನಾಪ್ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ. 2001ರಲ್ಲಿ ಬಿಜೆಪಿ ನಾಯಕನನ್ನು ದುಬೆ ಪೊಲೀಸ್ ಠಾಣೆಯಲ್ಲೇ ಹತ್ಯೆ ಮಾಡಿದ್ದ. ಆದರೂ ಆತನ ಮೇಲೆ ಯಾವುದೇ ಪೊಲೀಸರು ಕ್ರಮಕೈಗೊಳ್ಳಲು ವಿಫಲರಾಗಿದ್ದರು. ಸದ್ಯ ಪೊಲೀಸ್ ಹತ್ಯೆ ಪ್ರಕರಣದಲ್ಲಿ ಆತನ ಎನ್‍ಕೌಂಟರ್ ಆಗಿದ್ದು, ಇದರಿಂದ ಸ್ಥಳೀಯರು ಸಿಹಿ ಹಂಚಿ ಸಂಭ್ರಮಿಸಿದ್ದರು.

ತಿವಾರಿ ಎಂಬ ವ್ಯಕ್ತಿ ನೀಡಿದ ದೂರಿನ ಮೇಲೆ ಜುಲೈ 2ರಂದು ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆದರೆ ಆತನ ಗ್ಯಾಂಗ್ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ 8 ಮಂದಿ ಪೊಲೀಸರು ಸಾವನ್ನಪ್ಪಿದ್ದರು. ನಾಪತ್ತೆಯಾಗಿದ್ದ ದುಬೆಯನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ ಎನ್‍ಕೌಂಟರ್ ಕೂಡ ಮಾಡಿದ್ದರು. ಆದರೆ ಪೊಲೀಸರ ಈ ಎನ್‍ಕೌಂಟರ್ ವಿರುದ್ಧ ಹಲವು ಅನುಮಾನಗಳು ವ್ಯಕ್ತವಾಗಿದೆ. ರಾಜಕೀಯ ನಾಯಕರು, ಪೊಲೀಸರ ರಹಸ್ಯಗಳನ್ನು ಬಯಲು ಮಾಡುತ್ತಾನೆ ಎಂಬ ಕಾರಣದಿಂದ ದುಬೆಯನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *