ಗೌರಿ ಲಂಕೇಶ್‍ಗೆ ಪಾಕ್‍ನಿಂದ ಡ್ರಗ್ಸ್ ಸಪ್ಲೈ ಆಗ್ತಿತ್ತು: ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ

– ಲವ್ ಜಿಹಾದ್ ಮಾದರಿಯಲ್ಲಿ ಪಾಕಿಸ್ತಾನದಿಂದ ಡ್ರಗ್ಸ್ ಜಿಹಾದ್
– ಡ್ರಗ್ಸ್ ವಿಚಾರದಲ್ಲಿ ಇಂದ್ರಜಿತ್‍ಗೂ ಗೌರಿ ಮನಸ್ತಾಪವಿತ್ತು

ಯಾದಗಿರಿ: ಪತ್ರಕರ್ತೆ ಗೌರಿ ಲಂಕೇಶ್‍ಗೆ ಪಾಕಿಸ್ತಾನದಿಂದ ಡ್ರಗ್ಸ್ ಸಪ್ಲೈ ಆಗುತ್ತಿತ್ತು. ಬದುಕಿದ್ದಾಗ ಗೌರಿ ಲಂಕೇಶ್ ಡ್ರಗ್ಸ್ ತೆಗೆದುಕೊಳ್ತಿದ್ರು. ಈ ಬಗ್ಗೆ ತನಿಖೆಯಾಗಲಿ ಅಂತ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೊಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿರುವ ಅವರು, ಗೌರಿ ಲಂಕೇಶ್ ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ರೆ ನಾವು ನೀಡುತ್ತವೆ. ಈ ಬಗ್ಗೆ ನಾವು ಸಾಕ್ಷಿ ಸಂಗ್ರಹ ಮಾಡುತ್ತಿದ್ದೆವು. ಆದರೆ ಅಷ್ಟೊತ್ತಿಗೆ ಅವರು ಮೃತಪಟ್ಟರು. ಅದಕ್ಕೆ ಸುಮ್ಮನಾದೆವು ಎಂದ್ರು.

ಡ್ರಗ್ಸ್ ವಿಚಾರದಲ್ಲಿ ಇಂದ್ರಜಿತ್ ಗೂ ಗೌರಿಗೂ ಮನಸ್ತಾಪವಿತ್ತು. ಹೀಗಾಗಿ ಗೌರಿ ಬದುಕಿದ್ದಾಗ ಅವರು ಜೊತೆಗಿರಲಿಲ್ಲ. ಇಂದ್ರಜಿತ್ ಲಂಕೇಶ್‍ಗೆ ಈಗ ಜ್ಞಾನೋದಯವಾಗಿದೆ. ಇಂದ್ರಜಿತ್ ಮೊದಲು ಮನೆ ಸರಿ ಮಾಡಿಕೊಳ್ಳಲಿ. ಆಮೇಲೆ ಸಮಾಜ ಸುಧಾರಣೆ ಮಾಡಲಿ ಎಂದು ಟಾಂಗ್ ನೀಡಿದ್ರು.

ಪಾಕಿಸ್ತಾನದಿಂದ ಡ್ರಗ್ಸ್ ಜಿಹಾದ್ ನಡೀತಿದೆ. ಮುಸ್ಲಿಂ ರಾಷ್ಟ್ರಗಳಿಂದ ಡ್ರಗ್ಸ್ ಸಪ್ಲೈ ಆಗುತ್ತೆ. ಲವ್ ಜಿಹಾದ್ ಮಾದರಿಯಲ್ಲಿ ಡ್ರಗ್ಸ್ ಜಿಹಾದ್ ಆರಂಭವಾಗಿದೆ. ನಮ್ಮ ಯುವಕರನ್ನ ಹಾಳು ಮಾಡಲು ಈ ಜಿಹಾದ್ ನಡೆದಿದೆ. ಹಣ ಸಂಪಾದನೆ ಮಾಡಿ ಭಾರತದ ವಿರುದ್ಧ ಸಮರ ಸಾರುವ ಹುನ್ನಾರ ನಡೆಯುತ್ತಿದೆ ಎಂದ್ರು.

ಗಾಂಜಾ ಕುರಿತು ನಟಿ ನಿವೇದಿತಾ ಹೇಳಿಕೆಗೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬುದ್ಧಿ ಜೀವಿಗಳು, ನಟಿ ಮಣಿಗಳಿಂದಲೇ ನಮ್ಮ ಸಾಮ್ರಾಜ್ಯ ಹಾಳಾಗ್ತಿದೆ. ಗಾಂಜಾ, ಸೆಕ್ಸ್, ವೈಶ್ಯಾವಾಟಿಕೆಗೂ ಅನುಮತಿ ಕೊಡಿ ಅಂತಾರೆ. ಓಪನ್ ಕ್ಸಿಸ್ಸಿಂಗ್ ಗೂ ಅನುಮತಿ ಕೊಡಿ ಅಂತಾರೆ. ಇವೆಲ್ಲ ದೇಶಕ್ಕೆ ಮಾರಕ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ರು.

Comments

Leave a Reply

Your email address will not be published. Required fields are marked *