ಗೋಲ್ಡನ್​ ಸ್ಟಾರ್ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಸಿನಿ ಜೀವನದಲ್ಲಿ ಹಿಂದೆಂದೂ ಮಾಡದ ಪಾತ್ರದಲ್ಲಿ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ.

 ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ..ಮೊದಲ ಬಾರಿಗೆ ನನ್ನ ನೋಟವನ್ನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಣುಗಳಿಗೆ, ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ ಎಂದು ಬರೆದುಕೊಂಡು ಗಣೇಶ್ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಗಣೇಶ್, ತಾನು ಅಭಿನಯಿಸುತ್ತಿರುವ ಹೊಸ ಸಿನಿಮಾ ಕುರಿತಾಗಿ ಅಭಿಮಾನಿಗಳಿಗೆ ಒಂದು ಕ್ಲೂ ಕೊಟ್ಟಿದ್ದಾರೆ.

 

View this post on Instagram

 

A post shared by Ganesh (@goldenstar_ganesh)

ಸ್ಯಾಂಡಲ್‍ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗಷ್ಟೆ ತಮ್ಮ ಗಾಳಿಪಟ-2 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಮುಚ್ಚಿಟ್ಟ ಕಣ್ಣುಗಳಿಗೆ ಬಿಚ್ಚಿಟ್ಟ ಪ್ರೀತಿಯ ಬೆಳಕ ಚೆಲ್ಲಿ ಅಂತೆಲ್ಲ ಬರೆದುಕೊಂಡು ಕೋರ್ಟ್ ಕಟಕಟೆಯಲ್ಲಿ ನಿಂತಿರುವ ಫೊಟೋವನ್ನು ಪೋಸ್ಟ್ ಮಾಡಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಸಖತ್ ಸಿನಿಮಾದಲ್ಲಿ ಗಣೇಶ್ ಅಭಿನಯಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸಖತ್ ಸಿನಿಮಾದಲ್ಲಿ ಗಣೇಶ್ ಅಂಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುಳಿವು ಸಿಕ್ಕಿದೆ. ಈ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಗಣೇಶ್ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‍ನಲ್ಲಿ ಕಾವ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಗೋಲ್ಡನ್ ಸ್ಟಾರ್ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ.

Comments

Leave a Reply

Your email address will not be published. Required fields are marked *