ಗೊತ್ತಿದಿದ್ರೆ ಅವರ ಸಂಸಾರ ಒಡೆಯುತ್ತಿರಲಿಲ್ಲ: ಪತಿ ಬಗ್ಗೆ ರಾಖಿ ಬೇಸರ

ಮುಂಬೈ: ಬಿಗ್‍ಬಾಸ್ ಮನೆಯಿಂದ ಹೊರ ಬಂದಿರುವ ನಟಿ ರಾಖಿ ಸಾವಂತ್ ಪತಿ ರಿತೇಶ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಿತೇಶ್ ವಿವಾಹಿತ ಅಂತ ಮೊದಲೇ ತಿಳಿದಿದ್ರೆ ನಾನು ಆತನ ಸಂಸಾರವನ್ನ ಒಡೆಯುತ್ತಿರಲಿಲ್ಲ ಎಂದು ರಾಖಿ ಹೇಳಿಕೊಂಡಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿಯೂ ರಾಖಿ ತಮ್ಮ ಖಾಸಗಿ ಜೀವನದ ಹಲವು ವಿಚಾರಗಳನ್ನ ಹಂಚಿಕೊಂಡಿದ್ದರು. ಮದುವೆಯ ವಿಷಯವನ್ನ ಮುಚ್ಚಿಡುವ ಅವಶ್ಯಕತೆ ನನಗಿರಲಿಲ್ಲ. ಆದ್ರೆ ಕಾರಣಾಂತರಗಳಿಂದ ವಿಷಯವನ್ನ ಹೇಳಿಕೊಳ್ಳಲಾಗಲಿಲ್ಲ. ತುಂಬಾ ಪ್ರೀತಿಸಿ, ಇಷ್ಟಪಟ್ಟು ರಿತೇಶ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟೆ. ಆದ್ರೆ ಅವನ ಜೊತೆ ಬಾಳುವ ಅದೃಷ್ಟ ನನಗಿಲ್ಲ ಎಂದು ಹೇಳುತ್ತಾ ಮಂಕಾದ್ರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಬಳಿ ಸ್ಪರ್ಮ್ ದಾನ ಕೇಳಿದ ರಾಖಿ ಸಾವಂತ್

ಬಿಗ್‍ಬಾಸ್ ಪ್ರವೇಶಿಸಿದ ಬಳಿಕ ತಮ್ಮದೇ ಮಾತು, ಡ್ಯಾನ್ಸ್, ಕಿರಿಕಿರಿ, ಜಗಳದಿಂದ ಮನರಂಜನೆ ಕಳೆದುಕೊಂಡಿದ್ದ ಮನೆಗೆ ಹೊರ ಹುರುಪು ನೀಡಿದ್ದರು. ಸ್ಪರ್ಧಿಗಳಿಗೆ ನೇರವಾಗಿ ತಿರುಗೇಟು ನೀಡುವ ಮೂಲಕ ವೀಕ್ಷಕರಿಗೆ ಇಷ್ಟವಾಗಿದ್ದರು. ಆದ್ರೆ ಫೈನಲ್ ನಲ್ಲಿ ಬಿಗ್‍ಬಾಸ್ ನೀಡಿದ 14 ಲಕ್ಷ ರೂ. ಪಡೆದು ಕೊನೆ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ಮನೆ ಪ್ರವೇಶಿಸಿದಾಗಿನಿಂದಲೂ ತನ್ನತನ ಬಿಟ್ಟುಕೊಡದ ನಟಿ ರುಬಿನಾ ಬಿಗ್‍ಬಾಸ್-14ರ ವಿನ್ನರ್ ಆದರು.

Comments

Leave a Reply

Your email address will not be published. Required fields are marked *