ಗೆಳೆಯನ ಸಿನಿಮಾಕ್ಕೆ ನಿರ್ಮಾಪಕನಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಚಂದನವನದ ಪ್ರತಿಭಾವಂತ ನಾಯಕ ನಟರಾದ ಅನೀಶ್ ತೇಜೇಶ್ವರ್ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಬ್ಬರ ಸ್ನೇಹ ಹಲವು ವರ್ಷಗಳದ್ದು. ನಮ್ ಏರಿಯಾಲ್ ಒಂದಿನ ಚಿತ್ರದ ಮೂಲಕ ಶುರುವಾದ ಇವರ ಸಿನಿಮಾ ಜರ್ನಿ ಇಬ್ಬರನ್ನು ಸ್ನೇಹಿತರನ್ನಾಗಿ ಬೆಸೆಯಿತು. ಇದೀಗ ಇವರ ಸ್ನೇಹ ಪ್ರೊಫೆಷನಲ್ ಲೈಫ್ ನಲ್ಲೂ ಮುಂದುವರಿದಿದ್ದು ಗೆಳೆಯ ಅನೀಶ್ ತೇಜೇಶ್ವರ್ ಚಿತ್ರಕ್ಕೆ ನಿರ್ಮಾಪಕನಾಗುವ ಮೂಲಕ ರಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ.

ಅನೀಶ್ ತೇಜೇಶ್ವರ್ ನಿರ್ದೇಶಿಸಿ ನಟಿಸುತ್ತಿರುವ ‘ರಾಮಾರ್ಜುನ’ ಚಿತ್ರ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ತುಣುಕುಗಳು ಪ್ರಾಮಿಸಿಂಗ್ ಆಗಿ ಮೂಡಿಬಂದಿದ್ದು, ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ಹಂತದಲ್ಲಿರುವ ಗೆಳೆಯನ ಸಿನಿಮಾವನ್ನು ಸಿಂಪಲ್ ಸ್ಟಾರ್ ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವೂ ಕೂಡ ಚಿತ್ರದ ನಿರ್ಮಾಪಕರಲೊಬ್ಬರಾಗಲು ನಿರ್ಧರಿಸಿದ್ದು, ತಮ್ಮ ಪರಂವಃ ಸ್ಟುಡಿಯೋಸ್ ಮೂಲಕ ‘ರಾಮಾರ್ಜುನ’ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ರಕ್ಷಿತ್ ಶೆಟ್ಟಿ.

ಅನೀಶ್ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ‘ರಾಮಾರ್ಜುನ’ ಚಿತ್ರ ಪಕ್ಕಾ ಮಾಸ್ ಸಬ್ಜೆಕ್ಟ್ ಒಳಗೊಂಡಿದ್ದು, ಎರಡು ಭಿನ್ನ ಶೇಡ್ ನಲ್ಲಿ ಅನೀಶ್ ಇಲ್ಲಿ ಕಾಣಸಿಗಲಿದ್ದಾರೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ನಿಶ್ವಿಕಾ ನಾಯ್ಡು ಸ್ಕ್ರೀನ್ ಶೇರ್ ಮಾಡಿದ್ದು, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಹರೀಶ್ ರಾಜ್, ಅರುಣಾ ಬಾಲರಾಜ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಂಕ್ ವಿಷಲ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ನವೀನ್ ಕುಮಾರ್ ಛಾಯಾಗ್ರಹಣ, ಆನಂದ್ ರಾಜವಿಕ್ರಮ್ ಸಂಗೀತ ನಿರ್ದೇಶನ ರಾಮಾರ್ಜುನ ಚಿತ್ರಕ್ಕಿದೆ

Comments

Leave a Reply

Your email address will not be published. Required fields are marked *