ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಚಿತ್ರರಂಗದ ಗೆಳೆಯರು ಮತ್ತು ಕೆಲ ಬಾಲ್ಯದ ಸ್ನೇಹಿತರ ಜೊತೆಗೆ ಜಾಲಿಯಾಗಿ ಬೈಕ್ ರೈಡ್ ಹೋಗಿದ್ದಾರೆ.
ದರ್ಶನ್ ಅವರು ಆಗಾಗ ಟ್ರಿಪ್ ಹೋಗುತ್ತಿರುತ್ತಾರೆ. ಅದರಲ್ಲೂ ಕಾರು, ಬೈಕಿನ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುವ ಡಿಬಾಸ್, ಗೆಳೆಯರ ಜೊತೆ ವರ್ಷಕ್ಕೆ ಒಂದು ಬಾರಿ ಟ್ರಿಪ್ ಹೋಗುತ್ತಾರೆ. ಅಂತಯೇ ಈ ಬಾರಿ ಕೂಡ ತಮ್ಮ 15ಕ್ಕೂ ಹೆಚ್ಚು ಮಂದಿ ಗೆಳೆಯರೊಂದಿಗೆ ಮಡಿಕೇರಿಗೆ ಮೂರು ದಿನದ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.
Super Bikes Being Extremely Super When BOSS Rides With Team 😎🔥@dasadarshan pic.twitter.com/TKGLX3xGjg
— 𝐃 𝐂𝐞𝐥𝐞𝐛𝐫𝐢𝐭𝐢𝐞𝐬 𝐓𝐮𝐫𝐮𝐯𝐞𝐤𝐞𝐫𝐞® (@DTuruvekere) November 17, 2020
ಇಂದು ಆರ್.ಆರ್ ನಗರದ ನಿವಾಸದಿಂದ ಸಾರಥಿಯ ನೇತೃತ್ವದಲ್ಲೇ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಮತ್ತು ಚಿಂಗಾರಿಯ ಬಾಲ್ಯದ ಗೆಳೆಯರು ಮಡಿಕೇರಿ ಕಡೆ ಹೋಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಡಿಬಾಸ್ ಮತ್ತವರ ಸ್ನೇಹಿತರು ಅಲ್ಲೇ ತಂಗಲಿದ್ದಾರೆ. ದರ್ಶನ್ ಅವರು ಟ್ರಿಪ್ ಹೊರಟಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
Boss 😍@dasadarshan pic.twitter.com/oTB3ZnzDgH
— ಬಯಲು ಸೀಮೆ ಡಿ ಬಾಸ್ ಹುಡುಗರು (@Kaatera_DBOSS) November 17, 2020
ದರ್ಶನ್ ಅವರ ನಿವಾಸದ ಮುಂದೆ ಸುಮಾರು 15ಕ್ಕೂ ಹೆಚ್ಚಿನ ಬೈಕ್‍ಗಳು ನಿಂತಿರುವ ಫೋಟೋಗಳು ಮತ್ತು ಅವರು ಮನೆಯಿಂದ ಸೂಪರ್ ಬೈಕಿನಲ್ಲಿ ಹೋಗುತ್ತಿರುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಡಿ ಬಾಸ್ ತಮ್ಮ ನೀಲಿ ಬಣ್ಣದ ಬೈಕಿನಲ್ಲಿ ಕಪ್ಪು ಜಾಕೆಟ್ ತೊಟ್ಟು ರೈಡ್‍ಗೆ ಹೋಗಿದ್ದಾರೆ. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರು ತಾವು ರೈಡಿಗೆ ಸಿದ್ಧವಾಗಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
"ಗಜಪಡೆ"
It's Ride Day for Boss and His friends🏍🔥#Roberrt #DBoss@dasadarshan @umap30071 @Dcompany171 @TharunSudhir@Thoogudeepa_TM @Kkbdfa @DBossFc171 @sharadasrinidhi @DarshanSamrajya @Dbeatsmusik pic.twitter.com/B4dxB0hi0P— Thoogudeepa Team – R (@DTEAM7999) November 17, 2020

Leave a Reply