ಗುಟ್ಟು ಮುಚ್ಚಲು ಹೋಗಿ ತಮ್ಮನ ಉಸಿರು ನಿಲ್ಲಿಸಿದ್ಳು!

– ಜೈಲು ಸೇರಿದ ಹಂತಕ ಜೋಡಿ ಹಕ್ಕಿ
– ಎಲ್ಲ ವಿಷ್ಯ ಅಪ್ಪನಿಗೆ ಹೇಳ್ತಿನಿ ಅಂದಿದ್ದ ಬಾಲಕ

ಲಕ್ನೋ: ಪ್ರಿಯಕರನ ಜೊತೆಗೆ ಇರೋದನ್ನ ನೋಡಿದ ತಮ್ಮನನ್ನ ಸೋದರಿಯೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗಗರಾಜ್ ನಲ್ಲಿ ನಡೆದಿದೆ. ಪೊಲೀಸರು ಹಂತಕ ಜೋಡಿಯನ್ನ ಜೈಲಿಗಟ್ಟಿದ್ದಾರೆ.

ಕೌಂಧಿಯಾರಾ ವ್ಯಾಪ್ತಿಯ ಬಡಾಗೋಹಾನ ಗ್ರಾಮದಲ್ಲಿ ಈ ಕೊಲೆ ನಡೆದಿತ್ತು. ಗುರುವಾರ ಬೆಳಗ್ಗೆ 14 ವರ್ಷದ ಬಾಲಕನ ಶವ ಮನೆಯಲ್ಲಿ ಪತ್ತೆಯಾಗಿತ್ತು. ಮಗನ ನಿಗೂಢ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಬಾಲಕನ ಸೋದರಿಯನ್ನೇ ಬಂಧಿಸಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ರಾತ್ರಿ ಯುವತಿ ತನ್ನ 19 ವರ್ಷದ ಪ್ರಿಯಕರನನ್ನ ಕರೆಸಿಕೊಂಡಿದ್ದಳು. ಗೆಳೆಯನ ಜೊತೆ ಏಕಾಂತದಲ್ಲಿರೋದನ್ನ ಆಕೆಯ ತಮ್ಮ ನೋಡಿದ್ದಾನೆ. ಇಲ್ಲಿ ನಡೆದಿರೋದನ್ನ ಅಪ್ಪನಿಗೆ ಹೇಳ್ತೀನಿ ಎಂದು ಹೇಳಿದ್ದಾನೆ.

ತನ್ನ ಗುಟ್ಟು ಎಲ್ಲಿ ರಟ್ಟು ಆಗುತ್ತೆ ಅನ್ನೋ ಭಯದಲ್ಲಿ ಗೆಳೆಯನ ಜೊತೆ ಸೇರಿ ಕಬ್ಬಿಣದ ರಾಡ್ ನಿಂದ ಹೊಡೆದು ತಮ್ಮನನ್ನು ಕೊಂದು ಮಲಗಿದ ಸ್ಥಿತಿಯಲ್ಲಿ ಮಲಗಿಸಿದ್ದಾಳೆ. ನಂತರ ಪ್ರಿಯಕರ ಓಡಿ ಹೋಗಿ, ಈಕೆಯೂ ತನಗೆ ಏನು ಗೊತ್ತಿಲ್ಲದಂತೆ ಮಲಗಿದ್ದಾಳೆ. ಬೆಳಗ್ಗೆ ತಮ್ಮನಿಗೆ ಏನೋ ಆಗಿದೆ? ಯಾರೋ ಬಂದು ಕೊಂದು ಹೋಗಿದ್ದಾರೆ ಎಲ್ಲರನ್ನ ಎಚ್ಚರಿಸಿದ್ದಾಳೆ.

ಪೊಲೀಸರಿಗೆ ಯುವತಿಯ ಮೇಲೆಯೇ ಅನುಮಾನಗೊಂಡಿದ್ದರು. ಆಕೆಯ ಕಾಲ್ ಡಿಟೇಲ್ಸ್ ಮತ್ತು ಮೊಬೈಲ್ ಚೆಕ್ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ಇಬ್ಬರನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

Comments

Leave a Reply

Your email address will not be published. Required fields are marked *