ಗರ್ಭಿಣಿಯನ್ನು ಬುಟ್ಟಿಯಲ್ಲಿ ಕೂರಿಸಿ ನದಿ ದಾಟಿಸಿ, ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು

pregnent woman

– ನದಿ ದಾಟಿಸಲು ಹರಸಾಹಸಪಟ್ಟ ವಿಡಿಯೋ ವೈರಲ್

ರಾಯಪುರ: ರಸ್ತೆ ಸಂಪರ್ಕ ಸರಿಯಾಗಿಲ್ಲದ ಕಾರಣ ವಾಹನಗಳು ಓಡಾಡುತ್ತಿಲ್ಲ. ಹೀಗಾಗಿ ಗರ್ಭಿಣಿಯೊಬ್ಬರನ್ನು ಹರಸಾಹಸಪಟ್ಟು ನದಿ ದಾಟಿಸಲಾಗಿದ್ದು, ಬುಟ್ಟಿಯಲ್ಲಿ ಕೂರಿಸಿಕೊಂಡು ನಾಲ್ವರು ನದಿ ದಾಟಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಛತ್ತಿಸ್‍ಗಢದ ಸುರ್ಗುಜಾ ಜಿಲ್ಲೆಯ ಕದ್ನಾಯ್ ಗ್ರಾಮದಲ್ಲಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ಬುಟ್ಟಿಯಲ್ಲಿ ಕುಳಿತಿದ್ದು, ಅದಕ್ಕೆ ಹಗ್ಗ ಕಟ್ಟಿ, ಕೋಲಿಗೆ ಹಾಕಿಕೊಂಡು ನಾಲ್ವರು ಹೊತ್ತುಕೊಂಡು ನದಿ ದಾಟಿಸಿದ್ದಾರೆ.

ಅಂಬುಲೆನ್ಸ್ ಸೌಲಭ್ಯ ಇಲ್ಲದಿರುವುದು ಹಾಗೂ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕ ಇಲ್ಲದ ಕಾರಣ ಸ್ಥಳೀಯರು ಮಹಿಳೆಯನ್ನು ನದಿ ದಾಟಿಸಲು ಹರಸಾಹಸಪಟ್ಟಿದ್ದಾರೆ. ನದಿ ದಾಟಿಸಿದ ಬಳಿಕ ಮಹಿಳೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಸುರ್ಗುಜಾ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದು, ಮಳೆಗಾಲದಲ್ಲಿ ಈ ಭಾಗದ ಕೆಲ ಗ್ರಾಮಗಳಲ್ಲಿ ಈ ರೀತಿಯ ಸಂಕಷ್ಟ ಎದುರಾಗುತ್ತಿದೆ. ಇದಕ್ಕೆ ಉತ್ತಮ ಆರೋಗ್ಯ ಸೌಲಭ್ಯ ಇಲ್ಲದಿರುವುದು ಕಾರಣವಲ್ಲ. ಈ ಕುರಿತು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಇಂತಹ ಗ್ರಾಮಗಳ ಜನರಿಗಾಗಿ ಸಣ್ಣ ಕಾರ್‍ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಆದರೂ ಗ್ರಾಮಗಳ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಅಗತ್ಯವಿರುವವರಿಗೆ ಸಹಾಯ ಮಾಡಲು ಸಾಧ್ಯವಾದಷ್ಟು ಅವರ ನಿವಾಸಗಳ ಬಳಿ ತಲುಪಲು ಜಿಲ್ಲಾಡಳಿತ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *