ಗಂಡ-ಹೆಂಡ್ತಿ ಜಗಳದಲ್ಲಿ ಹೆಣವಾದ ಮಾವ

ಬೆಳಗಾವಿ: ಗಂಡ-ಹೆಂಡ್ತಿ ಜಗಳದಲ್ಲಿ ಮಾವನ ಕೊಲೆಯಾಗಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದಿದೆ.

ಸಿದ್ದಪ್ಪ ರಾಯಪ್ಪ ಖೋತ(58) ಅಳಿಯ ಬಾಳೇಶ್ ಬೋರಣ್ಣವರ (38) ಕೊಲೆಯಾದ ದುರ್ದೈವಿ. ಮಗಳನ್ನು ನೋಡಲು ಸಿದ್ದಪ್ಪ ಬಂದಿದ್ದರು. ಈ ವೇಳೆ ಪತಿ-ಪತ್ನಿ ಮಕ್ಕಳ ಆಗದ ವಿಷಯಕ್ಕೆ ಜಗಳ ಮಾಡುತ್ತಿದ್ದರು. ಇಬ್ಬರ ಜಗಳ ವಿಕೋಪಕ್ಕೆ ತಿರುಗಿದಾಗ ಸಿದ್ದಪ್ಪ ಮಧ್ಯ ಪ್ರವೇಶಿಸಿದ್ದಾರೆ. ಕೋಪದಲ್ಲಿದ್ದ ಬಾಳೇಶ್ ಪೈಪ್ ನಿಂದ ಮಾವನ ತಲೆಗೆ ಹೊಡೆದಿದ್ದಾನೆ. ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ- ಹುಟ್ಟುವ ಮೊದಲೇ ಎದುರುಗಡೆ ಮನೆಯ ಮಗು ಸಾವು

ಬಲವಾರ ಹೊಡೆತದಿಂದ ಕುಸಿದು ಬಿದ್ದ ಸಿದ್ದಪ್ಪರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಮುಂದಾಗಿದ್ದರು. ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿಯೇ ಸಿದ್ದಪ್ಪ ಸಾವನ್ನಪ್ಪಿದ್ದಾರೆ. ಘಟನ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರು ಮತ್ತು ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡು ಆರೋಪಿ ಬಾಳೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಂಡನಿಂದ ದೂರವಾಗಲೂ ಕೊರೊನಾ ಕಿಡ್ನಾಪ್ ಪ್ಲಾನ್- ಇದು ಬೆಂಗ್ಳೂರು To ದೆಹಲಿ ಕಥೆ

Comments

Leave a Reply

Your email address will not be published. Required fields are marked *