ಖಂಡಿತ ಪರದೆ ಮೇಲೆ ಬರುತ್ತೇನೆ: ರಾಧಿಕಾ ಪಂಡಿತ್

ಬೆಂಗಳೂರು: ಎರಡು ಮಕ್ಕಳ ತಾಯಿಯಾದ ಬಳಿಕ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಮನೆಯಲ್ಲೇ ತಮ್ಮ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಕೆಲವೊಂದು ಬಾರಿ ತಮ್ಮ ಸೆಲ್ಫಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಇದೇ ರೀತಿ ಇತ್ತೀಚೆಗೆ ಕೂಡ ರಾಧಿಕಾ ಅವರು ಒಂದು ಸೆಲ್ಫಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡು ‘ವಾರಾಂತ್ಯದಲ್ಲಿ ಒಂದು ಸೆಲ್ಫಿ’ ಎಂದು ಬರೆದುಕೊಂಡಿದ್ದರು.

 

ರಾಧಿಕಾ ಅವರು ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಕೆಲವೊಂದು ಕಮೆಂಟ್ ಗಳಿಗೆ ಸಿಂಡ್ರೆಲಾ ಕೂಡ ಉತ್ತರ ನೀಡುವ ಮೂಲಕ ಅಭಿಮಾನಿಗಳ ಜೊತೆಗಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.

ರಾಧಿಕಾ ಅವರ ಫೋಟೋಗೆ ಅಭಿಮಾನಿಯೊಬ್ಬರು, ಹೇಗಿದ್ದೀರಾ ರಾಧಿಕಾ? ನಾವು ನಿಮ್ಮನ್ನು ಮತ್ತೆ ಪರದೆ ಮೇಲೆ ನೋಡುವುದು ಯಾವಾಗ..? ಆದಷ್ಟು ಬೇಗ ಬನ್ನಿ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಿಂಡ್ರೆಲಾ, ಖಂಡಿತ ಎಂದು ಹೇಳಿದ್ದಾರೆ.

ಇದೇ ರೀತಿ ಇನ್ನೊಬ್ಬರು ಕಮೆಂಟ್ ಮಾಡಿ, ನಿಮ್ಮ ಒಂದು ಪೋಸ್ಟ್ ಗಾಗಿ ಹಲವು ದಿನಗಳಿಂದ ಕಾಯ್ತಿದ್ದೀನಿ. ಕೊನೆಗೂ ಒಂದು ಪೋಸ್ಟ್ ಹಾಕಿದ್ದೀರಿ ಧನ್ಯವಾದಗಳು. ಅಲ್ಲದೆ ಆದಷ್ಟು ಬೇಗ ಐರಾ ಫೋಟೋಗಳನ್ನು ಅಪ್ಲೋಡ್ ಮಾಡಿ. ನಾನು ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ. ದಯಮಾಡಿ ಆಕೆಯ ಫೋಟೋಗಳನ್ನು ಪೋಸ್ಟ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಶೀಘ್ರವೇ ಆಕೆಯ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ತಿಳಿಸಿದ್ದಾರೆ.

ಮದುವೆ ಆದ ಬಳಿಕ ರಾಧಿಕಾ ಅವರು ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದಲ್ಲಿ ಮೊದಲ ಬಾರಿಗೆ ನಟನೆ ಮಾಡಿದ್ದರು. ಈ ಸಿನಿಮಾದಲ್ಲಿ ರಂಗಿತಂರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ನಾಯಕಿಯಾಗಿ ಸಿಂಡ್ರೆಲಾ ಕಾಣಿಸಿಕೊಂಡಿದ್ದು, ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಆದಿ ಮತ್ತು ಲಕ್ಷ್ಮಿಯರಾಗಿ ನಟಿಸಿದ್ದರು. ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದ ಆದಿಲಕ್ಷ್ಮಿ ಪುರಾಣ 2019ರ ಜುಲೈ 19ರಂದು ತೆರೆಕಂಡಿತ್ತು.

Comments

Leave a Reply

Your email address will not be published. Required fields are marked *