ಕ್ವಾರಂಟೈನ್ ಸೆಂಟರ್​ನಲ್ಲಿ ಮೊದಲ ಹುಟ್ಟುಹಬ್ಬ- ಉಡುಪಿ ಶಾಸಕರಿಂದ ಕೇಕ್ ಗಿಫ್ಟ್

ಉಡುಪಿ: ಮಹಾಮಾರಿ ಕೊರೊನಾ ಇಡೀ ವಿಶ್ವವನ್ನು ತಲ್ಲಣಗೊಳಿಸಿದ್ದು, ಹಬ್ಬ, ಆಚರಣೆಗಳಂತಹ ಕಾರ್ಯಕ್ರಮಗಳನ್ನೇ ಜನ ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉಡುಪಿಯಲ್ಲಿ ಕ್ವಾರಂಟೈನ್ ಸೆಂಟರ್ ನಲ್ಲಿ ಒಂದು ವರ್ಷದ ಪುಟ್ಟ ಕಂದಮ್ಮನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದೆ.

ಉಡುಪಿ ಜಿಲ್ಲೆಗೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದು 6 ಸಾವಿರ ಜನ ಕ್ವಾರಂಟೈನ್ ಆಗಿದ್ದಾರೆ. ತಮ್ಮೂರಿಗೆ ಬಂದರೂ ಮನೆಗೆ ಹೋಗದ ಸ್ಥಿತಿ ಇದೆ. ಆದರೆ ಸಣ್ಣ ಸಣ್ಣ ಖುಷಿಗಳನ್ನು ಆಚರಿಸೋದಕ್ಕೆ ಉಡುಪಿಯಲ್ಲಿ ಜಿಲ್ಲಾಡಳಿತ ವಿನಾಯಿತಿ ಕೊಡುತ್ತದೆ. ಹೀಗಾಗು ಪುಟ್ಟ ಕಂದಮ್ಮನ ಹುಟ್ಟುಹಬ್ಬವನ್ನು ಕ್ವಾರಂಟೈನ್ ಕೇಂದ್ರದಲ್ಲೇ ಆಚರಿಸಲಾಗಿದೆ. ಉಡುಪಿಯ ಇಂದಿರಾ ನಗರದಲ್ಲಿ ವಿಶೇಷ ಹುಟ್ಟುಹಬ್ಬ ಆಚರಿಸಿದಂತಾಗಿದೆ.

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿ ಮಹಾರಾಷ್ಟ್ರದ ಥಾಣೆಯಿಂದ ಉಡುಪಿಗೆ ಬಂದಿರುವ ದಿನೇಶ್ ಮತ್ತು ಅಮೃತ ದಂಪತಿ ಕ್ವಾರಂಟೈನ್‍ನಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಒಂದು ವರ್ಷದ ಪುತ್ರಿ ಆದ್ಯಳ ಹುಟ್ಟುಹಬ್ಬ ಬಂದಿದೆ. ಹೀಗಾಗಿ ಕ್ವಾರಂಟೈನ್ ಕೇಂದ್ರದಲ್ಲೇ ಆದ್ಯಳ ಪ್ರಥಮ ವರ್ಷದ ಹುಟ್ಟುಹಬ್ಬ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಹುಟ್ಟುಹಬ್ಬ ಆಚರಣೆಗೆ ಅವಕಾಶ ನೀಡುವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್‍ಗೆ ದಿನೇಶ್ ಕುಟುಂಬ ಮನವಿ ಮಾಡಿತ್ತು.

ಅಧಿಕಾರಿಗಳ ಮೂಲಕ ಅವಕಾಶ ಸಿಕ್ಕಿದ್ದು, ಇನ್ನೂ ವಿಶೇಷ ಎಂಬಂತೆ ಕಂದಮ್ಮಳ ಹುಟ್ಟುಹಬ್ಬಕ್ಕೆ ಕೇಕ್ ವ್ಯವಸ್ಥೆಯನ್ನು ಶಾಸಕರೇ ಮಾಡಿದ್ದಾರೆ. ಮುಂಬೈನಿಂದ ಬಂದ ಕುಟುಂಬ ಕ್ವಾರಂಟೈನ್ ಕೇಂದ್ರದಲ್ಲೇ ಸರಳವಾಗಿ ಹುಟ್ಟುಹಬ್ಬ ಆಚರಿಸಿ, ಸಂತಸ ಪಟ್ಟಿದೆ.

Comments

Leave a Reply

Your email address will not be published. Required fields are marked *