ಕ್ಯಾಸಲ್‍ರಾಕ್ ಬಳಿ ರೈಲಿನ ಮೇಲೆ ಕುಸಿದ ಗುಡ್ಡ

ಕಾರವಾರ: ಉತ್ತರಕನ್ನಡದ ಕ್ಯಾಸಲ್‍ರಾಕ್ ಬಳಿ ಗೋವಾದಿಂದ ಬರುತ್ತಿದ್ದ ರೈಲಿನ ಮೇಲೆ ಗುಡ್ಡ ಕುಸಿದಿದೆ. ಗುಡ್ಡ ಕುಸಿದ ಧಾಟಿಗೆ ವಾಸ್ಕೊಡಿಗಾಮಾ ರೈಲು ಹಳಿ ತಪ್ಪಿದೆ. ಕೆಸರಿನಲ್ಲಿ ಸಿಲುಕಿದೆ. ರೈಲೊಳಗೆ ಮಳೆ ನೀರು ನುಗ್ಗುತ್ತಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದ್ರೆ ಬೋಗಿಗಳಿಂದ ಹೊರಬರಲಾಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಕಂಡು ಕೇಳರಿಯದ ರೀತಿಯಲ್ಲಿ ವರುಣ ಅಬ್ಬರಿಸ್ತಿದ್ದಾನೆ. ದಾಖಲೆ ಮಳೆಗೆ ಜಿಲ್ಲೆಯ ಎಲ್ಲಾ ಜೀವ ನದಿಗಳು ತುಂಬಿಹರಿಯುತ್ತಿವೆ. ಗಂಗಾವಳಿ ರೋಷಾವೇಶಕ್ಕೆ ಹುಬ್ಬಳ್ಳಿ-ಅಂಕೋಲಾ ಹೈವೇ ಸಂಪೂರ್ಣ ಜಲಾವೃತವಾಗಿದೆ. ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಐನೂರಕ್ಕೂ ಹೆಚ್ಚು ಟ್ರಕ್ ನಿಂತುಬಿಟ್ಟಿವೆ. ಅಂಕೋಲದ ಸುಂಕಸಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಹೊಟೆಲ್ ಒಂದರಲ್ಲಿ ಆಶ್ರಯ ಪಡೆದಿದ್ದ ಜನರನ್ನು ಹೆಲಿಕಾಪ್ಟರ್ ಮೂಲಕ ನೌಕಾ ಪಡೆ ರಕ್ಷಿಸಿದೆ. ಹಲವರನ್ನು ಬೋಟ್ ಮೂಲಕವೂ ರಕ್ಷಿಸಿದೆ. ಹಿಚಡ್ಕ ಗ್ರಾಮದಲ್ಲಿ ನೋಡ ನೋಡ್ತಿದ್ದಂತೆ ಮನೆಯೊಂದು ಕುಸಿದುಬಿದ್ದಿದೆ. ಇದನ್ನೂ ಓದಿ: ಜಲಾವೃತಗೊಂಡ ನಿಪ್ಪಾಣಿಯ ಕೋಡಣಿ ಗ್ರಾಮದ 300ಕ್ಕೂ ಹೆಚ್ಚು ಮನೆಗಳು

ಹೆಬ್ಬುಳ, ಗುಡ್ನಾಪುರ ಗ್ರಾಮಗಳಿಗೆ ನೀರು ನುಗ್ಗಿದೆ. ಅಂಬೇವಾಡಿ ಗ್ರಾಮ ಜಲಾವೃತವಾಗ್ತಿದೆ. ಬೆಳಸೆ ಶಿರೂರಿನಲ್ಲಿ ದೋಣಿ ಪಲ್ಟಿಯಾಗಿ ರಕ್ಷಣೆಗೆ ತೆರಳಿದ್ದ ಇಬ್ಬರು ಕಾಣೆಯಾಗಿದ್ದಾರೆ.. ಅಘನಾಶಿನಿ ನದಿ ಆರ್ಭಟಕ್ಕೆ ಸಿದ್ದಾಪುರದ ಶೇಡಿ ದಂಟಕಲ್ ಗ್ರಾಮ, ತೋಟ-ಗದ್ದೆಗಳು ಜಲಾವೃತವಾಗಿವೆ. ರಸ್ತೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಇದನ್ನೂ ಓದಿ: ಕೆರೆ ನೀರಿಗೆ ಜಿಗಿದು ಟ್ರಾನ್ಸ್‌ಫಾರ್ಮರ್ ಸರಿಪಡಿಸಿದ ಲೈನ್‍ಮನ್

Comments

Leave a Reply

Your email address will not be published. Required fields are marked *