ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಸೋಲಿಸುವ ಹಠಕ್ಕೆ ಬಿದ್ದಂತೆ ಕಾಣಿಸುತ್ತಿದೆ. ಈ ನಡುವೆ ಕೆಲ ಸ್ಪರ್ಧಿಗಳು ತಮ್ಮ ಎದುರಾಳಿ ಆಟಗಾರರನ್ನು ಆಯ್ಕೆ ಮಾಡುವ ಸಂದರ್ಭ ಮೈಂಡ್‍ಗೇಮ್ ಆಡಲು ಶುರುಮಾಡಿದ್ದಾರೆ. ಬಿಗ್ ಬಾಸ್ ಕೊಟ್ಟಂತಹ ಗಾಜಿನ ತೊಟ್ಟಿಗೆ ಗೋಲಿಗಳನ್ನು ಹಾಕುವ ಟಾಸ್ಕ್ ನಲ್ಲಿ ದಿವ್ಯಾ ಸುರೇಶ್ ಎದುರಾಳಿಯಾಗಿ ಮಂಜು ಪಾವಗಡ ಅವರನ್ನು ಆಯ್ಕೆ ಮಾಡಿ ನಂತರ ಅವರ ಮೈಂಡ್‍ಗೇಮ್ ಬಗ್ಗೆ ತಿಳಿಸಿದ್ದಾರೆ.

ಗಾಜಿನ ತೊಟ್ಟಿಗೆ ಗೋಲಿಗಳನ್ನು ಹಾಕುವ ಟಾಸ್ಕ್ ನಲ್ಲಿ ದಿವ್ಯಾ ತಮ್ಮ ಎದುರಾಳಿ ಆಟಗಾರನಾಗಿ ಮಂಜು ಅವರನ್ನು ಆಯ್ಕೆ ಮಾಡಿ ಆಟಕ್ಕೆ ಸಜ್ಜಾಗಿದ್ದರು. ನಂತರ ಆಟದಲ್ಲಿ ಮೊದಲು ಮಂಜು ಒಂದು ಗೋಲಿಯನ್ನು ಗ್ಲಾಸ್‍ನೊಳಗೆ ಹಾಕಿದರೆ. ಇವರೊಂದಿಗೆ ದಿವ್ಯಾ ಕೂಡ ಒಂದು ಗೋಲಿಯನ್ನು ಹಾಕಿ ತೀವ್ರ ಪೈಪೋಟಿ ನೀಡಿದರು. ನಂತರ ಕಡೆಯದಾಗಿ ಒಂದು ಗೋಲಿ ಗ್ಲಾಸ್‍ಗೆ ಹಾಕಲು ಬಾಕಿ ಇದ್ದಾಗ ದಿವ್ಯಾ ಅವರು, ಮಂಜು ಅವರನ್ನು ಮಾತನಾಡಿಸಲು ಪ್ರಯತ್ನಿಸಿದರು ಆದರೂ ಮಂಜು ಮಾತನಾಡಿಕೊಂಡೆ ಗೋಲಿಗಳನ್ನು ಗಾಜಿನ ಗ್ಲಾಸ್‍ನೊಳಗೆ ಹಾಕಿ ಜಯಗಳಿಸಿದರು. ಈ ಮೂಲಕ ದಿವ್ಯಾ ಅವರನ್ನು ಸೋಲಿಸಿ ಟಾಸ್ಕ್ ಗೆದ್ದುಕೊಂಡರು.

ನಂತರ ಮಾತಿಗಿಳಿದ ದಿವ್ಯಾ ಮತ್ತು ಮಂಜು ಟಾಸ್ಕ್ ಬಗ್ಗೆ ವಿಮರ್ಶೆ ಮಾಡತೊಡಗಿದರು. ಮಂಜು ಮೀಸೆ ತಿರುಗಿಸಿಕೊಂಡು ನೀನು ನನ್ನನ್ನು ಸುಲಭವಾಗಿ ಸೋಲಿಸಬಹುದೆಂದು ಟಾಸ್ಕ್ ನಲ್ಲಿ ನನ್ನನ್ನು ಆಯ್ಕೆ ಮಾಡಿಕೊಂಡಿದ್ದು ಅಲ್ವ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ದಿವ್ಯಾ ಹಾಗೆನಿಲ್ಲ ನನಗೆ ಯಾರು ಗೆದ್ದರು ಕೂಡ ಸಂತೋಷವೆ. ಈ ಸಲ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ನೀನು ವಿನ್ ಆಗಿ ತೋರಿಸು ಎಂದು ಸವಾಲು ಹಾಕಿದರು. ಇದಕ್ಕೆ ಮಂಜು ಹೌದು ಈ ವಾರ ಗೆಲ್ಲಲೇ ಬೇಕು ಎಂದರು. ಇದಕ್ಕೆ ದಿವ್ಯಾ ಈ ವಾರ ಕ್ಯಾಪ್ಟನ್ ಆದರೆ ಸುಲಭವಾಗಿ ಎರಡು ವಾರ ಕಳೆಯಬಹುದು ಎಂದು ಮಂಜುಗೆ ಟಿಪ್ಸ್ ಕೊಟ್ಟರು.

ದಿವ್ಯಾ ಟಾಸ್ಕ್ ನಲ್ಲಿ ಮಂಜು ಅವರನ್ನು ಕೆರಳಿಸಿ ಗೆಲ್ಲಬಹುದೆಂದು ಅಂದುಕೊಂಡು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಆದರೆ ಮಂಜು ಮಾತ್ರ ತಲೆ ಉಪಯೋಗಿಸಿಕೊಂಡು ಟಾಸ್ಕ್ ನಲ್ಲಿ ವಿನ್ ಆದರು. ಆ ಬಳಿಕ ಮಂಜು ಜೊತೆ ದಿವ್ಯಾ ತನ್ನ ಮೈಂಡ್‍ಗೇಮನ್ನು ಬಿಚ್ಚಿಟ್ಟರು. ಇದನ್ನು ಗಮನಿಸಿದಾಗ ಬಿಗ್‍ಮನೆಯಲ್ಲಿ ಸ್ಪರ್ಧಿಗಳ ನಡುವೆ ಸ್ಪರ್ಧೆ ಹೆಚ್ಚಾಗತೊಡಗಿದೆ ಎಂದು ಭಾಸವಾಗುತ್ತಿದೆ.

Leave a Reply