ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಕಾರುಣ್ಯ ರಾಮ್

ಬೆಂಗಳೂರು: ಕಾರುಣ್ಯ ರಾಮ್ ತಮ್ಮ ಕೇಶರಾಶಿಯನ್ನು 14 ಇಂಚು ಕಟ್ ಮಾಡಿ ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದಾರೆ.

2021ರ ಹೊಸ ವರ್ಷದಲ್ಲಿ ಏನನ್ನಾದರೂ ಮಾಡಬೇಕು ಎಂದುಕೊಂಡಿದ್ದ ಕಾರುಣ್ಯರಾಮ್, ಅದರಂತೆ ಅವರ ಕೂದಲನ್ನು 14 ಇಂಚು ಕಟ್ ಮಾಡಿ ಕ್ಯಾನ್ಸರ್ ರೋಗಿಗಳಿಗೆ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೈಸೂರಿನಲ್ಲಿ ನಡೆಯುತ್ತಿರುವ ತಮ್ಮ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿದ ಕಾರುಣ್ಯ ರಾಮ್ ಕೂದಲಿಗೆ ಕತ್ತರಿ ಹಾಕಿದ್ದಾರೆ. ಬೆಂಗಳೂರಿನ ಹೇರ್ ಡೊನೇಷನ್ ಸಂಸ್ಥೆಯ ಮೂಲಕವಾಗಿ ಕ್ಯಾನ್ಸರ್ ರೋಗಿಗಳಿಗೆ ತಲೆಕೂದಲನ್ನು ದಾನ ಮಾಡಿದ್ದಾರೆ.

ಕೂದಲು ದಾನ ಮಾಡಿರುವ ಪೋಸ್ಟ್‍ನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಕಾರುಣ್ಯ ರಾಮ್, ನನ್ನ ಕೇಶರಾಶಿಯಲ್ಲಿ 14 ಇಂಚುಗಳಷ್ಟು ಉದ್ದದ ತಲೆಕೂದಲನ್ನು ಕ್ಯಾನ್ಸ್‍ರ್ ರೋಗಿಗಳಿಗೆ ನೀಡಿದ್ದೇನೆ. 2021 ರ ಆರಂಭದಲ್ಲಿ ಅವಶ್ಯತಕೆ ಇರುವವರಿಗೆ ಏನಾದರೂ ಸಹಾಯ ಮಾಡಬೇಕು ಎಂದುಕೊಂಡಿದ್ದೆನು ಅದರಂತೆ ಈ ಕಾರ್ಯವನ್ನು ಮಾಡಿದ್ದೇನೆ. ಇಷ್ಟು ಉದ್ದದ ಕೂದಲು ಬೆಳೆಯಬೇಕಾದರೆ ಸುಮಾರು ಮೂರು ವರ್ಷಗಳು ಬೇಕಾಗುತ್ತದೆ.

 

View this post on Instagram

 

A post shared by Karunya (@ikarunya)

 

ಪ್ರತಿಯೊಬ್ಬ ಭಾರತೀಯ ಮಹಿಳೆಗೂ ಕೂದಲು ಸ್ತ್ರೀಯತ್ವದ ಬಹುಮುಖ್ಯ ಭಾಗವಾಗಿದೆ. ಹೆಣ್ಣಿನ ಸೌಂದರ್ಯವನ್ನು ಎದ್ದು ಕಾಣುವಂತೆ ಕೇಶರಾಶಿ ಮಾಡುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಾನು ಕೂದಲಿನ ಪ್ರತಿಯೊಂದು ಎಳೆಯನ್ನು ಪ್ರೀತಿಸುತ್ತೇನೆ. ಕ್ಯಾನ್ಸ್‍ರ್ ರೋಗಿಗಳಿಗಾಗಿ ಕೂದಲು ನೀಡುತ್ತಿದ್ದೇನೆ. ಇದು ಅಗತ್ಯವಿರುವವರನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ಅವರ ಆರೋಗ್ಯದ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ . ಇದರಿಂದ ಸಾಕಷ್ಟು ಮಹಿಳೆಯರು ಮುಂದೆ ಬಂದು ತಾವೂ ನನ್ನೊಂದಿಗೆ ಕೈ ಜೋಡಿಸಲಿದ್ದಾರೆ ಎನ್ನುವ ಭರವಸೆ ಇದೆ ಎಂದು ಬರೆದುಕೊಂಡಿದ್ದಾರೆ.

 

View this post on Instagram

 

A post shared by Karunya (@ikarunya)

ಈ ಹಿಂದೆ ನಟ ಧ್ರುವಾ ಸರ್ಜಾ ತಮ್ಮ ಸಿನಿಮಾಗಿ ಉದ್ದ ಕೂದಲನ್ನು ಬಿಟ್ಟಿದ್ದರು. ಸಿನಿಮಾದ ಚಿತ್ರೀಕರಣ ಮುಗಿದ ನಂತರ ಅವರ ಉದ್ದದ ಕೂದಲನ್ನು ಕಿಮೋಥೆರಪಿಗೊಳಗಾದ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದರು. ಇದೀಗ ನಟಿ ಕಾರುಣ್ಯ ರಾಮ್ ಕೂಡ ಕ್ಯಾನ್ಸರ್ ರೋಗಿಗಳಿಗೆ ಕೇಶರಾಶಿಯನ್ನು ದಾನ ಮಾಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Comments

Leave a Reply

Your email address will not be published. Required fields are marked *