ಕೌರವನ ಜೊತೆ ಕಾಲ ಕಳೆದ ಡಿ ಬಾಸ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟ, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿ ಕಾಲ ಕಳೆದಿದ್ದಾರೆ. ಸಚಿವರೊಂದಿಗೆ ಕಾಲ ಕಳೆದಿರು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ಬಿ.ಸಿ.ಪಾಟೀಲ್ ಅವರ ಅಧೀಕೃತ ನಿವಾಸಕ್ಕೆ ಭೇಟಿ ನೀಡಿದ್ದ ಡಿ ಬಾಸ್ ಸ್ವಲ್ಪ ಹೊತ್ತು ಹರಟೆ ಹೊಡೆದು ಕಾಲ ಕಳೆದಿದ್ದಾರೆ. ಈ ವೇಳೆ ಬಿ.ಸಿ.ಪಾಟೀಲ್ ಮಾತ್ರವಲ್ಲದೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಕಾಣಿಸಿಕೊಂಡಿದ್ದು, ಇಬ್ಬರು ಸಚಿವರ ಜೊತೆ ದರ್ಶನ್ ಮಾತುಕತೆ ನಡೆಸಿದ್ದಾರೆ. ಯಜಮಾನನ ಈ ಭೇಟಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.

ದರ್ಶನ್ ಇಬ್ಬರು ಸಚಿವರ ಭೇಟಿ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಆದರೆ ಭೇಟಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ರಾಜರಾಜೇಶ್ವರಿ ನಗರದ ಉಪ ಚುನಾವಣೆಯ ಪ್ರಚಾರದ ವೇಳೆ ದರ್ಶನ್ ಹಾಗೂ ಬಿ.ಸಿ.ಪಾಟೀಲ್ ಒಟ್ಟಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ್ದರು. ಇಬ್ಬರು ನಟರಾಗಿರುವುದರಿಂದ ಪ್ರಚಾರದ ವೇಳೆ ಸಹಜವಾಗಿಯೇ ಬೆರೆತಿದ್ದರು.

ಈ ಹಿಂದೆ ಸಹ ದರ್ಶನ್ ಹಲವು ಬಾರಿ ಬಿ.ಸಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದರು. ಆದರೆ ಆಗ ಹೆಚ್ಚು ಚರ್ಚೆಯಾಗಿರಲಿಲ್ಲ. ಇದೀಗ ಇಬ್ಬರು ಸಚಿವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಅಚ್ಚರಿ ಎಂದರೆ ಬಿ.ಸಿ.ಪಾಟೀಲ್ ಹಾಗೂ ದರ್ಶನ್ ಅವರಿಗೆ ದುರ್ಯೋಧನ ಪಾತ್ರ ಅಚ್ಚುಮೆಚ್ಚು. ಬಿ.ಸಿ.ಪಾಟೀಲ್ ಸಹ ನಾಟಕ ಹಾಗೂ ಸಿನಿಮಾಗಳಲ್ಲಿ ಧುರ್ಯೋಧನನ ಪಾತ್ರದಲ್ಲಿ ಘರ್ಜಿಸಿದ್ದಾರೆ. ಅದೇ ರೀತಿ ದರ್ಶನ್ ಸಹ ಕುರುಕ್ಷೇತ್ರ ಸಿನಿಮಾದಲ್ಲಿ ದುಯೋಧನನ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು. ಹೀಗೆ ಇಬ್ಬರ ನಟರ ಮಧ್ಯೆ ಪಾತ್ರಗಳ ಸಾಮ್ಯತೆ ಇದೆ. ಹೀಗಾಗಿ ಎಲ್ಲೆಯೇ ಭೇಟಿಯಾದರೂ, ಇಬ್ಬರೂ ತುಂಬಾ ಕ್ಲೋಸ್ ಆಗಿ ಬೆರೆಯುತ್ತಾರೆ.

Comments

Leave a Reply

Your email address will not be published. Required fields are marked *