ಕೋವಿಶೀಲ್ಡ್ ಗಿಂತ ದುಬಾರಿಯಾದ ಕೊವ್ಯಾಕ್ಸಿನ್ ಲಸಿಕೆ

– 2 ಲಸಿಕೆ ಪ್ರತಿ ಡೋಸ್‍ಗೆ ಎಷ್ಟು ಬೆಲೆ?

ಬೆಂಗಳೂರು: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆ ಸರ್ಕಾರದೊಂದಿಗೆ ಬೆಲೆ ಒಪ್ಪಂದಕ್ಕೆ ಬಂದಿದ್ದು, ಪ್ರತಿ ಡೋಸ್‍ಗೆ 295 ರೂ.ಗೆ ಮಾರಾಟ ಮಾಡಲಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜನವರಿ 14ರಂದು ಮೊದಲು 12 ಕೇಂದ್ರಗಳಲ್ಲಿ, ಸುಮಾರು 55 ಲಕ್ಷ ಡೋಸ್‍ಗಳನ್ನು ಪೂರೈಸಲು ಕೇಂದ್ರ ಸರ್ಕಾರ ಭಾರತ್ ಬಯೋಟೆಕ್‍ಗೆ ಸೂಚಿಸಿದೆ. ಮೊದಲ ಹಂತದಲ್ಲಿ ಕನಿಷ್ಠ 38.5 ಲಕ್ಷ ಮತ್ತು ಎರಡನೇ ಹಂತದಲ್ಲಿ 16.5 ಲಕ್ಷ ಲಸಿಕೆಯನ್ನು ಪೂರೈಸಲಾಗುತ್ತದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಎಚ್‍ಎಲ್‍ಎಲ್ ಲೈಫ್‍ಕೇರ್ ಲಿಮಿಟೆಡ್ ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಆದೇಶವನ್ನು ಹೊರಡಿಸಿದೆ. ಮೊದಲ ಹಂತದಲ್ಲಿ 231 ಕೋಟಿ ಮೌಲ್ಯದ 1.1 ಕೋಟಿ ಡೋಸ್ ಲಿಸಿಕೆ ಪೂರೈಕೆಯಾಗಲಿದೆ. ಒಟ್ಟು 4.5 ಕೋಟಿ ಡೋಸ್ ಗಳಿಗಾಗಿ ಕೇಂದ್ರ ಸರ್ಕಾರ 1,176 ಕೋಟಿಗೆ ಸದ್ಯದ ದರಕ್ಕೆ ಒಪ್ಪಂದ ಮಾಡಿಕೊಂಡಿದೆ.

ಇನ್ನು ಪುಣೆಯ ಸೆರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಜೊತೆ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಪ್ರತಿ ಡೋಸ್ ಗೆ 200 ರೂ. ಪ್ಲಸ್ ಜಿಎಸ್‍ಟಿ ಸೇರಿದಂತೆ ಒಪ್ಪಂದ ಮಾಡಿಕೊಂಡಿದೆ. ಏಪ್ರಿಲ್ 2021ರೊಳಗೆ 4.5 ಕೋಟಿ ಡೋಸ್ ಸೆರಂ ವಿತರಿಸಲಿದೆ. ಜಿಎಸ್‍ಟಿಯೂ ಸೇರಿದಂತೆ ಕೋವಿಶೀಲ್ಡ್ ಪ್ರತಿ ಡೋಸ್‍ಗೆ 210 ರೂ. ಆಗಲಿದೆ.

Comments

Leave a Reply

Your email address will not be published. Required fields are marked *