ಕೋವಿಡ್-19 ಜಾಗೃತಿ ಮೂಡಿಸಲು ‘ಎಂಜಾಯ್ ಎಂಜಾಮಿ’ ಸಾಂಗ್‍ಗೆ ಪೊಲೀಸರ ನೃತ್ಯ

ಚೆನ್ನೈ: ಕೊರೊನಾ ವೈರಸ್‍ನಿಂದ ವಿಶ್ವದಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ ಮತ್ತು ಅನೇಕ ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಈ ಮಧ್ಯೆ ಕೆಲವರು ತಮಗೆ ಮತ್ತು ಇತರರಿಗೆ ಉತ್ಸಾಹ ತುಂಬಲು ಕೊರೊನಾ ವಿರುದ್ಧ ಹೋರಾಟ ಮುಂದುವರೆಸುವುದಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಚೆನ್ನೈ ರೈಲ್ವೆ ಪೊಲೀಸ್ ಅಧಿಕಾರಿಗಳು ‘ಎಂಜಾಯ್ ಎಂಜಾಮಿ’ ಎಂಬ ಜನಪ್ರಿಯ ತಮಿಳು ಹಾಡಿಗೆ ರೈಲ್ವೆ ನಿಲ್ದಾಣದಲ್ಲಿ ನೃತ್ಯ ಮಾಡಿದ್ದಾರೆ.

ಈ ವಿಡಿಯೋವನ್ನು ತಮಿಳುನಾಡಿನ ಪ್ರೆಸ್ ಇನ್‍ಫಾರ್ಮೆಷನ್ ಬ್ಯೂರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಅಧಿಕಾರಿಗಳು ಚೆನ್ನೈ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್ ಮತ್ತು ಗ್ಲೌವ್ಸ್ ಧರಿಸಿ ಹಾಡಿಗೆ ನೃತ್ಯ ಮಾಡುತ್ತಾರೆ. ಈ ನೃತ್ಯ ಪ್ರದರ್ಶನವನ್ನು ವೀಕ್ಷಿಸಲು ಜನರು ಕೂಡ ಒಟ್ಟಿಗೆ ಸೇರಿರುವುದನ್ನು ಕಾಣಬಹುದಾಗಿದೆ.

ತಮಿಳಿನ ‘ಎಂಜಾಯ್ ಎಂಜಾಮಿ’ ಹಾಡನ್ನು ಧೀರವರು ಹಾಡಿದ್ದು, ಅರಿವು ಎಂಬವರು ಗೀತೆಯನ್ನು ರಚಿಸಿದ್ದಾರೆ.

Comments

Leave a Reply

Your email address will not be published. Required fields are marked *