ಯಾದಗಿರಿ: ಕೋವಿಡ್ ಸೋಂಕಿತರ ನರಳಾಟ ಸುಳ್ಳು. ರಾಜ್ಯದಲ್ಲಿ ಆಕ್ಸಿಜನ್ ಮತ್ತು ಇಂಜೆಕ್ಷನ್ ಸಮಸ್ಯೆ ಇಲ್ಲ, ಬೀದರ್ ಪ್ರಕರಣಗಳು ಸಹ ಸುಳ್ಳು. ಮನೆಯಲ್ಲಿ ಕುಳಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಪಶು ಸಂಗೋಪನಾ ಸಚಿವರಾದ ಪ್ರಭು ಚೌವ್ಹಾಣ್ ಹೇಳಿಕೆ ನೀಡಿದ್ದಾರೆ.

ಯಾದಗಿರಿಯ ಜಿ.ಪಂ ಸಭಾಂಗಣದಲ್ಲಿ ಮಾತನಾಡಿದ ಪ್ರಭು ಚೌವ್ಹಾಣ್ ಅವರು, ರಾಜ್ಯ ಸರ್ಕಾರದ ವಿಫಲತೆ ಸುದ್ದಿಗಳು ಸುಳ್ಳು. ಕಾಂಗ್ರೆಸ್ ಪಕ್ಷ ಏನು ಅಂತ ರಾಜ್ಯದ ಜನರಿಗೆ ಗೊತ್ತಿದೆ, ಅವರು ಮನೆಯಲ್ಲಿ ಖಾಲಿ ಕುಳಿತು ಏನು ಬೇಕಾದರೂ ಮಾತನಾಡುತ್ತಾರೆ. ಅವರದ್ದು ಮಾತನಾಡುವ ಕೆಲಸ ಅವರು ಮಾತನಾಡುತ್ತೀರಲಿ ನಾವು ನಮ್ಮ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡರು.

ನಿಯಮ ಉಲ್ಲಂಘನೆ
ಜಿಲ್ಲೆಯಲ್ಲಿ ಸಭೆ ನಡೆಸಿದ ಪ್ರಭು ಚೌವ್ಹಾಣ್, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಘಟನೆ ಸಹ ನಡೆಯಿತು. ಸಭೆ ಬಳಿಕ ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಜಿ.ಪಂ ಸಭಾಂಗಣದಲ್ಲಿ ಕೋವಿಡ್ ಸಭೆ ಮುಕ್ತಾಯವಾದ ಬಳಿಕ ಸಚಿವ ಪ್ರಭು ಚೌವ್ಹಾಣ್‍ರೊಂದಿಗೆ ಹಲವು ಜನ ಗುಂಪು ಸೇರಿದ್ದರು. ಜನರ ಗುಂಪಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೊತೆಗೆ ಸಚಿವರು ಸಂವಹನ ನಡೆಸಿದರು. ಸಚಿವರ ಜೊತೆಗೆ ಶಾಸಕ ವೆಂಕಟರೆಡ್ಡಿ ಮುದ್ನಾಳ, ಸಂಸದ ಅಮರೇಶ್ವರ ನಾಯಕ ಸಹ ನಿಯಮ ಉಲ್ಲಂಘನೆ ಮಾಡಿದರು.

Leave a Reply