ಕೋವಿಡ್ ಸೋಂಕಿತನ ಸ್ಥಳಾಂತರಕ್ಕೆ 1 ಲಕ್ಷ ಬೇಡಿಕೆ ಇಟ್ಟ ವೈದ್ಯ ಅರೆಸ್ಟ್

ನವದೆಹಲಿ: ಗುರುಗ್ರಾಮದಿಂದ ಲುಧಿಯಾನಾಗೆ ಕೋವಿಡ್-19 ಸೋಂಕಿತರನ್ನು ಸಾಗಿಸಲು 1 ಲಕ್ಷ ಬೇಡಿಕೆ ಇಟ್ಟಿದ್ದ ಅಂಬ್ಯುಲೆನ್ಸ್ ಮಾಲೀಕನನ್ನು ಬಂಧಿಸಿರುವುದಾಗಿ ಪೋಲಿಸರು ಶುಕ್ರವಾರ ತಿಳಿಸಿದ್ದಾರೆ.

ಆರೋಪಿ ಮಿಮೋಹ್ ಕುಮಾರ್ ಬುಂಡ್ವಾಲ್, ಎಂಬಿಬಿಎಸ್ ವೈದ್ಯನಾಗಿದ್ದು, ಇಂದರ್ ಪುರಿಯ ದಶಗಢ್ ಗ್ರಾಮದ ನಿವಾಸಿಯಾಗಿದ್ದಾನೆ.

ಸೋಂಕಿತರ ಕುಟುಂಬಸ್ಥರು ಅಂಬುಲೆನ್ಸ್ ಹುಡುಕಲು ಸಾಧ್ಯವಾಗದ ಕಾರಣ, ದೆಹಲಿ ಮೂಲದ ಆಪರೇಟರ್‌ರನ್ನು ಸಂಪರ್ಕಿಸಿದೇವು. ಆಪರೇಟರ್‌ಗಳು ಆರಂಭದಲ್ಲಿ 1.40 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟರು. ನಂತರ ಅವರು 20,000 ಕಡಿತಗೊಳಿಸಿ, ಅವರ ಬಳಿ ಆಕ್ಸಿಜನ್ ಸ್ಟಾಕ್ ಇದ್ದಿದ್ದರಿಂದ ಹಣ ನೀಡಲು ಕುಟುಂಬಸ್ಥರು ಒಪ್ಪಿಕೊಂಡಿರುದಾಗಿ ತಿಳಿಸಿದ್ದಾರೆ. ಅಂಬುಲೆನ್ಸ್ ಆಪರೇಟರ್‌ಗಳಿಗೆ ಮುಂಗಡವಾಗಿ 95,000 ಮೊತ್ತವನ್ನು ಪಾವತಿಸಲಾಗಿದ್ದು, ಉಳಿದ 25,000 ರೂ. ವನ್ನು ಲುಧಿಯಾನಕ್ಕೆ ತಲುಪಿದ ಕೂಡಲೇ ಪಾವತಿಸಿರುವುದಾಗಿ ರೋಗಿಯ ಮಗಳು ಆರೋಪಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇಂದರ್‍ಪುರಿಯ ದಶಗಢ ಗ್ರಾಮದಲ್ಲಿರುವ ಕಾರ್ಡಿಕೇರ್ ಅಂಬುಲೆನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅಂಬುಲೆನ್ಸ್ ಸೇವೆಗಳನ್ನು ಒದಗಿಸುತ್ತಿದ್ದು, ಸೋಂಕಿತರ ಬಳಿ ಹಣ ಲೂಟಿ ಮಾಡುತ್ತಿದೆ ಎಂದು ಮಾಹಿತಿ ಬಂದಿತು. ಈ ಬಗ್ಗೆ ತನಿಖೆ ನಡೆಸಿ, ಅಂಬುಲೆನ್ಸ್ ಸೇವೆ ಒದಗಿಸುತ್ತಿದ್ದ ಕಂಪನಿಯನ್ನು ಬುಂಡ್ವಾಲ್‍ನನ್ನು ಪೊಲೀಸರು ಪತ್ತೆ ಹಚ್ಚಿದ್ದು, ಈ ಸಂಬಂಧ ಇಂದರ್‍ಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಎಂಬಿಬಿಎಸ್ ವೈದ್ಯನಾಗಿದ್ದು, ಕಳೆದ ಎರಡು ವರ್ಷಗಳಿಂದ ಅಂಬುಲೆನ್ಸ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ ಉರ್ವಿಜಾ ಗೋಯಲ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *