ಉಡುಪಿ: ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
63 ವರ್ಷದ ಪ್ರಭಾಕರ್ ಪುತ್ರನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೋವಿಡ್-19 ಸೋಂಕಿತನ ಪ್ರಾಥಮಿಕ ಸಂಪರ್ಕದ ಕಾರಣ ಜುಲೈ 5 ರಂದು ಉಡುಪಿ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದರು. ಆದರೆ ಆತ್ಮಹತ್ಯೆ ನಂತರ ಕೊರೊನಾ ಪರೀಕ್ಷಾ ವರದಿ ವೈದ್ಯರ ಕೈ ಸೇರಿದೆ.

ಆತ್ಮಹತ್ಯೆ ಮಾಡಿಕೊಂಡ ಪ್ರಭಾಕರ ಅವರಿಗೆ ಕೊರೊನಾ ನೆಗೆಟಿವ್ ಬಂದಿದೆ. ಕೊರೊನಾ ಆತಂಕದಲ್ಲಿ ಆತ್ಮಹತ್ಯೆ ಸಾಧ್ಯತೆಯಿದೆ. ಜನ ಧೃತಿಗೇಡಬಾರದು, ರೋಗ ಲಕ್ಷಣ ಇದ್ದರೂ ಅದು ಕೋವಿಡ್ ಆಗಬೇಕಾಗಿಲ್ಲ ಎಂದು ಡಿಎಚ್‍ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.
ಐಸೋಲೇಶನ್ ವಾರ್ಡಿನಲ್ಲಿ ಯಾರೂ ಇಲ್ಲದ ಸಂದರ್ಭ ಆತ್ಮಹತ್ಯೆಗೆ ಶರಣಾಗಿರಬಹುದು. ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಪರ್ಕಿತರ ಪ್ರಾಥಮಿಕ ಸಂಪರ್ಕಿತರಿಂದ ಎಲ್ಲರಿಗೂ ಸೋಂಕು ಹಬ್ಬುತ್ತದೆ ಎಂಬುದು ಸರಿಯಲ್ಲ. ಸೋಂಕಿತ ಕೆಮ್ಮಿದರೆ, ಸೀನಿದರೆ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ ಎಂದು ಡಿಎಚ್‍ಒ ತಿಳಿಸಿದರು.

Leave a Reply