ಕೋಲಿನಿಂದ ಹೊಡೆದು ನಾಲ್ವರಿಂದ ಯುವಕನ ಮೇಲೆ ಗ್ಯಾಂಗ್‍ರೇಪ್

RAPE CASE

– ಮಾಡೆಲ್ ಆಗಿದ್ದ 19 ವರ್ಷದ ಯುವಕ

ಮುಂಬೈ: ಸಿನಿಮಾದಲ್ಲಿ ನಟಿಸಲೆಂದು ಗುಜರಾತ್‍ನಿಂದ ನಗರಕ್ಕೆ ಬಂದಿದ್ದ ಪುರುಷ ಮಾಡೆಲ್‍ನ್ನು 4 ಜನ ಯುವಕರು ರೇಪ್ ಮಾಡಿರುವ ಘಟನೆ ವರದಿಯಾಗಿದೆ.

ಮಾಡೆಲ್ ಆಗಿದ್ದ 19 ವರ್ಷದ ಯುವಕ ತನ್ನ ಸಂಬಂಧಿಕರೊಂದಿಗೆ ಥಾಣೆಯಲ್ಲಿ ವಾಸಿಸುತ್ತಿದ್ದ. ಆ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಶುಕ್ಲಾ ಎಂಬಾತಾನೊಂದಿಗೆ ಪರಿಚಯವಾಗಿತ್ತು. ಇವನನ್ನು ಭೇಟಿ ಮಾಡಿದ್ದ. ಕೆಲದಿನಗಳ ನಂತರ ಶುಕ್ಲಾ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ಬಂದು ಮಾಡೆಲ್‍ನ್ನು ಮತ್ತೊಮ್ಮೆ ಕರೆಸಿಕೊಂಡಿದ್ದ ಎಂದು ವರದಿಯಾಗಿತ್ತು.

ಶುಕ್ಲಾ ಮತ್ತು ಇತರ ಸ್ನೇಹಿತರು ಸೇರಿಕೊಂಡು ಮಾಡೆಲ್‍ನ್ನು ಮನೆಯ ಮೇಲ್ಛಾವಣಿಗೆ ಕರೆದುಕೊಂಡು ಹೋಗಿ ಅಲ್ಲಿ ಆತನಿಗೆ ಥಳಿಸಿ, ಕಿರುಕುಳ ನೀಡಿ ಅತ್ಯಾಚಾರಮಾಡಿ, ಕೋಲಿನಿಂದ ಹೊಡೆದಿದ್ದಾರೆ. ಈ ಘಟನೆಯನ್ನು ತನ್ನ ಫೋನಿನ ಮೂಲಕ ಚಿತ್ರೀಕರಿಸಿದ ಶುಕ್ಲಾ ನಾವೂ ತಪ್ಪಿಸಿಕೊಳ್ಳುವ ಮೊದಲು ಪೊಲೀಸರಿಗೆ ಮಾಹಿತಿ ತಿಳಿಸಿದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ.

ಹಲವು ಪ್ರಯತ್ನಗಳ ನಂತರ ಮಾಡೆಲ್ ತನ್ನ ಫೋನ್‍ನ್ನು ಎತ್ತಿಕೊಂಡು ತನ್ನ ಸಂಬಂಧಿಕರಿಗೆ ಸಂಪರ್ಕಿಸಿ ಮನೆಗೆ ತಲುಪಿದ್ದಾನೆ. ನಂತರ ನಡೆದ ಘಟನೆಯನ್ನು ವಿವರಿಸಿದ್ದಾನೆ. ಕುಟುಂಬಸ್ಥರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಶುಕ್ಲಾ, ಜೈಸ್ವಾಲ್ (34) ಮತ್ತು ಅರವಿಂದ್ ಪ್ರಜಾಪತಿ(23)ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *