ಕೊಹ್ಲಿ, ತಮನ್ನಾಗೆ ಕೇರಳ ಹೈಕೋರ್ಟ್ ನೋಟಿಸ್

ತಿರವನಂತಪುರಂ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಸಿನಿಮಾ ನಟಿ ತಮನ್ನಾ ಭಾಟಿಯಾ ವಿರುದ್ಧ ಕೇರಳ ಹೈಕೋರ್ಟ್ ಆನ್‍ಲೈನ್ ಗೇಮ್‍ಗೆ ಪ್ರಜೋದನೆ ನೀಡುತ್ತಿರುವ ಕಾರಣ ಹೇಳಿ ನೋಟಿಸ್ ಜಾರಿ ಮಾಡಿದೆ.

ವಿರಾಟ್ ಕೊಹ್ಲಿ, ತಮನ್ನಾ ಮತ್ತು ಅಜು ವರ್ಗೀಸ್ ಆನ್‍ಲೈನ್ ರಮ್ಮಿಗೇಮ್‍ನ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಆನ್‍ಲೈನ್ ಗೇಮ್‍ಗಳಿಂದಾಗಿ ಯುವ ಜನರು ತಮ್ಮ ಹಣವನ್ನು ಕಳೆದುಕೊಳ್ಳುವುದರೊಂದಿಗೆ, ಈ ಸ್ಟಾರ್‍ಗಳು ಹೇಳಿದಂತೆ ಮಾಡುವುದರಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೊಚ್ಚಿ ಮೂಲದ ಪೌಲಿ ವದಕ್ಕನ್ ಹೈಕೋರ್ಟ್‍ಗೆ ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಆನ್‍ಲೈನ್ ಬೆಟ್ಟಿಂಗ್ ಗಂಭೀರ ಸಮಸ್ಯೆಯಾಗಿದ್ದು, ಕೂಡಲೇ ಕೇರಳ ಸರ್ಕಾರಕ್ಕೆ ಸ್ಪಷ್ಟನೆ ನೀಡುವಂತೆ ಕೊಹ್ಲಿ ಹಾಗೂ ಇತರ ಇಬ್ಬರಿಗೆ ನೋಟಿಸ್ ಜಾರಿ ಮಾಡಿದೆ.

ಆನ್‍ಲೈನ್‍ನಲ್ಲಿ ರಮ್ಮಿ ಆಡಿ ಹಣ ಗಳಿಸಿ ಎಂಬ ಜಾಹೀರಾತೊಂದರಲ್ಲಿ ಕೊಹ್ಲಿ ಹಾಗೂ ತಮನ್ನಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದು ಆನ್‍ಲೈನ್ ಬೆಟ್ಟಿಂಗ್ ಗೇಮ್‍ಗಳಿಗೆ ಪ್ರಜೋದನೆ ಎಂಬ ಮಾತು ಹಲವು ಜನರಿಂದ ಈ ಹಿಂದೆಯು ಕೇಳಿಬಂದಿತ್ತು ಮತ್ತು ಈ ಗೇಮ್‍ಗಳಿಂದಾಗಿ ಹಲವು ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು.

ಕೆಲದಿನಗಳ ಹಿಂದೆ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದ ತಿರುವನಂತಪುರಂ ಮೂಲದ 28 ವರ್ಷದ ಯುವಕ ಆನ್‍ಲೈನ್ ಗೇಮ್‍ನ ಗೀಳಿಗೆ ಬಿದ್ದು 21 ಲಕ್ಷ ರೂಪಾಯಿ ಕಳೆದುಕೊಂಡ ಬಗ್ಗೆ ವರದಿಯಾಗಿತ್ತು.

Comments

Leave a Reply

Your email address will not be published. Required fields are marked *