ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಮಾಡಿಕೊಂಡಿದ್ದ ವಿವಾದದ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಕೊನೆಗೂ ಮೌನ ಮುರಿದಿದ್ದಾರೆ.
ಈ ಬಾರಿಯ ಐಪಿಎಲ್-2020ಯಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಇಬ್ಬರು ದಿಟ್ಟಿಸಿ ನೋಡಿಕೊಂಡು ವಿವಾದ ಮಾಡಿಕೊಂಡಿದ್ದರು. ಈ ವಿಡಿಯೋ ಅಂದು ಸಖತ್ ವೈರಲ್ ಆಗಿತ್ತು. ಕೆಲವರು ಕೊಹ್ಲಿಯನ್ನು ಇನ್ನೂ ಕೆಲವರು ಸೂರ್ಯಕುಮಾರ್ ಯಾದವ್ ಅವರನ್ನು ಈ ವಿಡಿಯೋ ಇಟ್ಟುಕೊಂಡು ಬಹಳ ಟ್ರೋಲ್ ಮಾಡಿದ್ದರು.

ಈ ವಿವಾದದ ಬಗ್ಗೆ ಕ್ರೀಡಾ ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿರುವ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿಯವರು ಮೈದಾನದಲ್ಲಿ ಯಾವಾಗಲೂ ಅಕ್ರಮಣಕಾರಿಯಾಗಿ ಇರುತ್ತಾರೆ. ಅದು ಮುಂಬೈ ವಿರುದ್ಧದ ಪಂದ್ಯವಾಗಲಿ ಅಥವಾ ಇಂಡಿಯಾಗಾಗಿ ಆಡುತ್ತಿರಲಿ ಇಲ್ಲವೇ ಯಾವುದೇ ಫ್ರಾಚೈಸಿಗಾಗಿ ಆಡುತ್ತಿರಲಿ ಕೊಹ್ಲಿ ಯಾವಾಗಲೂ ಅಕ್ರಮಣಕಾರಿಯಾಗಿ ಕಾಣಿಸುತ್ತಾರೆ ಎಂದು ಹೇಳಿದ್ದಾರೆ.

ಅಂದು ನಮ್ಮ ತಂಡಕ್ಕೂ ಮತ್ತು ಆರ್‌ಸಿಬಿ ತಂಡಕ್ಕೂ ಆ ಪಂದ್ಯ ಬಹಳ ಪ್ರಮುಖವಾಗಿತ್ತು. ಇಬ್ಬರು ಗೆಲ್ಲಲೇ ಬೇಕಿದ್ದ ಪಂದ್ಯವಾದ ಕಾರಣ ಇಬ್ಬರು ಅಕ್ರಣಕಾರಿಯಾಗಿದ್ದವು. ಈ ಕಾರಣದಿಂದ ಅಂದು ಆ ಕ್ಷಣದಲ್ಲಿ ಮಾತ್ರ ಮೈದಾನದಲ್ಲಿ ನಾವಿಬ್ಬರೂ ದಿಟ್ಟಿಸಿ ನೋಡಿಕೊಂಡಿದ್ದವು. ಆದರೆ ಆ ಪಂದ್ಯದಲ್ಲಿ ಅದೇ ಹೈಲೈಟ್ ಆಗಿದೆ. ಪಂದ್ಯವಾದ ಬಳಿಕ ಡಗೌಟ್‍ಗೆ ಬಂದ ಕೊಹ್ಲಿ ಚೆನ್ನಾಗಿ ಆಡಿದೆ ವೆಲ್‍ಡನ್ ಎಂದು ಹೇಳಿ ಹೋದರು. ನಮ್ಮಿಬ್ಬರ ಮಧ್ಯೆ ಯಾವುದೇ ವಿವಾದವಿಲ್ಲ ಎಂದು ಹೇಳಿದ್ದಾರೆ.

ನಡೆದಿದ್ದೇನು?
ಅಬುಧಾಬಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 28ರಂದು ನಡೆದ ಬೆಂಗಳೂರು, ಮುಂಬೈ ನಡುವಿನ ಪ್ಲೇ ಆಫ್ ಸೇರುವ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ ಪಡೆ ನಿರೀಕ್ಷೆ ಮಟ್ಟದಲ್ಲಿ ಮಿಂಚಲು ವಿಫಲವಾಗಿತ್ತು. ಪಂದ್ಯದಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣವಾದ ಸೂರ್ಯಕುಮಾರ್ ಯಾದವ್, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ 43 ಎಸೆತಗಳಲ್ಲಿ ಮೂರು ಸಿಕ್ಸ್ ಮತ್ತು 10 ಬೌಂಡರಿ ಸಮೇತ 79 ರನ್ ಗಳ ಕಾಣಿಕೆ ನೀಡಿದ್ದರು. ಇದನ್ನು ಓದಿ: ಟೀಂ ಇಂಡಿಯಾಗೆ ಸೆಲೆಕ್ಟ್ ಆಗದೇ ಇದ್ರೂ 2 ಸಾವಿರ ರನ್ ಪೂರ್ಣ- ಸೂರ್ಯಕುಮಾರ್ ಸಾಧನೆ
https://twitter.com/sameersheikh45/status/1321643114197590019
ಮುಂಬೈ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್ ಯಾದವ್, ಬೆಂಗಳೂರು ಬೌಲರ್ ಗಳನ್ನು ಸುಲಭಗಾಗಿ ಎದುರಿಸುತ್ತಿದ್ದರು. ಆದರೆ ಇತ್ತ ತಂಡದ ಬೌಲರ್ ಗಳು ಎದುರಾಳಿ ತಂಡದ ವಿಕೆಟ್ ಪಡೆಯಲು ವಿಫಲರಾಗಿದ್ದು, ಕೊಹ್ಲಿ ಅವರಿಗೆ ಸೂರ್ಯಕುಮಾರ್ ಅವರನ್ನು ಪ್ರಚೋದನೆ ಮಾಡುವಂತೆ ಮಾಡಿತ್ತು. 13ನೇ ಓವರಿನ ಅಂತಿಮ ಎಸೆತದ ಚೆಂಡನ್ನು ಎಕ್ಸ್ಟ್ರಾ ಕವರ್ ನತ್ತ ಸೂರ್ಯಕುಮಾರ್ ಯಾದವ್ ಬಾರಿಸಿದ್ದರು. ಈ ಚೆಂಡನ್ನು ಕೊಹ್ಲಿ ತಡೆದಿದ್ದರು. ಓವರ್ ಮುಕ್ತಾಯವಾದ ಕಾರಣ ಸೂರ್ಯಕುಮಾರ್ ಯಾದವ್ ಕ್ರಿಸ್‍ನಲ್ಲೇ ಕೊಹ್ಲಿಯನ್ನು ನೋಡುತ್ತಾ ನಿಂತರು. ಕೂಡಲೇ ಚೆಂಡನ್ನು ಪಡೆದ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬಳಿ ಗರಂ ಆಗಿ ಹೋಗಿ ನಿಂತರು. ಇತ್ತ ಸೂರ್ಯಕುಮಾರ್ ಸಮಯದ ಬಳಿಕ ನಾನ್ ಸ್ಟ್ರೈಕರ್ ಬ್ಯಾಟ್ಸ್ ಮನ್ ಬಳಿಗೆ ತೆರಳಿದ್ದರು. ಯಾದವ್ ಅಲ್ಲಿಂದ ಮುಂದೆ ಸಾಗಿದರೆ ಕೊಹ್ಲಿ ಮಾತ್ರ ಕೆಲ ಸಮಯ ಅವರನ್ನೇ ನೋಡುತ್ತಾ ನಿಂತಿದ್ದರು.

Leave a Reply