ಕೊರೊನಾ ಹೋಗಲಾಡಿಸಲು ಗಾಣಗಾಪುರ ದತ್ತಾತ್ರೇಯನ ಮೊರೆ ಹೋದ ಅರ್ಚಕರು

ಕಲಬುರಗಿ: ಮಹಾಮಾರಿ ಕೊರೊನಾ ಸೋಂಕು ಕಡಿಮೆಯಾಗಿ ಜನರಿಗೆ ಉತ್ತಮ ಆರೋಗ್ಯ ನೀಡಲಿ ಎಂದು ಕಲಬುರಗಿ ಜಿಲ್ಲೆ ಅಫಜಲಪುರ್ ತಾಲೂಕಿನ ಗಾಣಗಾಪುರ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಅರ್ಚಕರು ಮೂರು ದಿನಗಳ ಕಾಲ ಗುರುದತ್ತ ಪಾರಾಯಣ ನಡೆಸಿದ್ದಾರೆ.

ಸದ್ಯ ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಹಲವು ಜನ ಈಗಾಗಲೇ ಬಲಿಯಾಗಿದ್ದಾರೆ. ಇನ್ನು ಸಾವಿರಾರು ಜನ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಬಳಲುತ್ತಿದ್ದಾರೆ. ಹೀಗಾಗಿ ಜನರಿಗೆ ಉತ್ತಮ ಆರೋಗ್ಯ ಸಿಗಲಿ ಹಾಗೂ ಗುರುದತ್ತನ ಕೃಪೆಯಿಂದ ಎಲ್ಲಾ ಜನ ಈ ಮಹಾಮಾರಿ ಸೋಂಕಿನಿಂದ ಗುಣಮುಖರಾಗಿ ಬೇಗ ಹೊರ ಬರಲಿ ಎಂದು ಅರ್ಚಕರು ದೇವರ ಮೊರೆ ಹೋಗಿದ್ದಾರೆ.

ಈ ಗುರುದತ್ತ ಪಾರಾಯಣದಲ್ಲಿ ದೇವಾಲಯದ 10ಕ್ಕೂ ಹೆಚ್ಚು ಅರ್ಚಕರು ಭಾಗಿಯಾಗಿದ್ದು, ಮುಂದಿನ ದಿನಗಳಲ್ಲಿ ಸೋಂಕು ಕಡಿಮೆಯಾಗದಿದ್ದರೆ ಮತ್ತೆ ಪೂಜೆ ಮುಂದುವರಿಸುವುದಾಗಿ ನಿರ್ಧರಿಸಿದ್ದಾರೆ.

Comments

Leave a Reply

Your email address will not be published. Required fields are marked *