ಕೊರೊನಾ ಸೋಂಕಿತನ ಶವ ರಸ್ತೆಯಲ್ಲೇ ಬಿಟ್ಟು ಹೋದ್ರು

-ಅಂಬುಲೆನ್ಸ್ ಸಿಬ್ಬಂದಿಯ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್: ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಶವವನ್ನು ಅಂಬುಲೆನ್ಸ್ ಸಿಬ್ಬಂದಿ ರಸ್ತೆಯಲ್ಲಿಯೇ ಬಿಟ್ಟು ಹೋಗಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಅಂಬುಲೆನ್ಸ್ ಸಿಬ್ಬಂದಿಯ ಕಳ್ಳಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತ ವ್ಯಕ್ತಿ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಭೋಪಾಲನಲ್ಲಿರುವ ಪೀಪಲ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ವ್ಯಕ್ತಿಯನ್ನು ಚಿರಾಯು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸೋಮವಾರ ವ್ಯಕ್ತಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾದ ಆತನಿಗೆ ಸೋಂಕು ತಗುಲಿರೋದು ದೃಢವಾಗಿತ್ತು.

ತಂದೆಯನ್ನು ಚಿರಾಯು ಆಸ್ಪತ್ರೆಗೆ ದಾಖಲಿಸಿದ್ದಾಗ ಚೆನ್ನಾಗಿದ್ದರು. ಅಂಬುಲೆನ್ಸ್ ನಲ್ಲಿ ಏನಾಯ್ತು ಅಂತ ಗೊತ್ತಿಲ್ಲ. ಪೀಪಲ್ಸ್ ಆಸ್ಪತ್ರೆಯ ಶಿಫಾರಸ್ಸಿನ ಮೇರೆಗೆ ತಂದೆ ಅವರನ್ನು ಚಿರಾಯುಗೆ ಶಿಫ್ಟ್ ಮಾಡಲಾಗಿತ್ತು. ಶವವನ್ನು ರಸ್ತೆಯಲ್ಲಿ ಬಿಟ್ಟಿರುವ ವಿಚಾರದಲ್ಲಿ ಎರಡು ಆಸ್ಪತ್ರೆಗಳ ತಪ್ಪಿದೆ. ತಂದೆ ಜೂನ್ 23ರಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನದ ಬಗ್ಗೆ ಯಾರು ಮಾಹಿತಿ ಸಹ ನೀಡಿಲ್ಲ ಎಂದು ಮೃತ ವ್ಯಕ್ತಿಯ ಪುತ್ರ ಹೇಳಿದ್ದಾರೆ.

ಇನ್ನು ಎರಡೂ ಆಸ್ಪತ್ರೆಗಳು ಮಾತ್ರ ಒಬ್ಬರ ಮೇಲೊಬ್ಬರ ಒಬ್ಬರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *