ಕೊರೊನಾ ಸಂಗ್ರಾಮದಲ್ಲಿ ಶಸ್ತ್ರಾಸ್ತ್ರ ಇಲ್ಲದೆ ಯುದ್ಧ ಮಾಡೋದು ಹೇಗೆ?: ಡಾ. ಪ್ರಕಾಶ್ ಶೆಟ್ಟಿ

ಉಡುಪಿ: ಕೊರೊನಾ ಎಂಬ ಯುದ್ಧರಂಗದಲ್ಲಿ ಸೈನಿಕರಿಲ್ಲದೆ ಸೈನಿಕರ ಕೈಯಲ್ಲಿ ಶಸ್ತ್ರಾಸ್ತ್ರ ಇಲ್ಲದ ಪರಿಸ್ಥಿತಿ ನಮ್ಮದು ಎಂದು ಉಡುಪಿಯ ಕರ್ನಾಟಕ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಡಾ. ಪ್ರಕಾಶ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಮ್ಮ ಅಳಲು ತೋಡಿಕೊಂಡ ಅವರು, ಸಾಂಕ್ರಾಮಿಕ ಕೊರೊನಾವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಮಾಡಿ ಎಂದು ಟಾರ್ಗೆಟ್ ಕೊಡುತ್ತಿದೆ. ಹಿಂದಿನ ದಿನ ಪಾಸಿಟಿವ್ ಬಂದ 10 ಪಟ್ಟು ಟೆಸ್ಟ್ ಮಾಡಬೇಕು ಎಂದು ಗುರಿ ನೀಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈ ಟಾರ್ಗೆಟ್ ಅನ್ನು ರೀಚ್ ಮಾಡೋದಕ್ಕೆ ಬಹಳ ಕಷ್ಟ ಆಗುತ್ತಿದೆ. ಕಾರಣ ಏನು ಅಂತ ಅಂದ್ರೆ ಉಡುಪಿ ಜಿಲ್ಲೆಯಲ್ಲಿ ಶೇ. 40 ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ಉಡುಪಿಯಲ್ಲಿ ಈಗಾಗಲೇ ಕೊರೊನಾ 10 ಸಾವಿರದ ಗಡಿ ದಾಟಿದೆ. ಸುಮಾರು 3,000 ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು ಇದೆ. 1,500 ಸಿಬ್ಬಂದಿ ಕೊರತೆಯಿಟ್ಟಕೊಂಡು ಕೆಲಸ ಮಾಡೋದು ಹೇಗೆ? ಹೀಗಿರುವಾಗ ಕೇವಲ ಟಾರ್ಗೆಟ್ ಕೊಟ್ಟರೆ ಸಾಲದು ಕೊರೊನಾ ವಾರಿಯರ್ಸ್ ಅನ್ನು ನೇಮಿಸಿ. ಈಗಿರುವ ಸಿಬ್ಬಂದಿ ಮೇಲಿನ ಒತ್ತಡವನ್ನು ದಯವಿಟ್ಟು ಕಡಿಮೆಮಾಡಿ ಎಂಬ ಕೂಗು ಕೇಳಿಬಂದಿದೆ. ನಾವು ಜೀವಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ಆದರೆ ವ್ಯವಸ್ಥೆಗಳು ಸರಿಯಾಗಿರಬೇಕು ಎಂದು ಕೊರೊನಾ ವಾರಿಯರ್ಸ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *