ಕೊರೊನಾ ಸಂಖ್ಯೆ ಹೆಚ್ಚಾದ್ರೆ ಬೆಡ್ ಸಮಸ್ಯೆ ಖಚಿತ – ಇಲ್ಲಿದೆ ಬೆಡ್ ಇಲ್ಲದ ಬೆಂಗಳೂರಿನ ಭೀಕರ ಕಥೆ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಉಂಟಾಗಿದೆ. ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇದೆ? ಎಷ್ಟು ಬೆಡ್‍ನಲ್ಲಿ ರೋಗಿಗಳಿದ್ದಾರೆ ಎನ್ನುವ ಕುರಿತಾಗಿ ಎಕ್ಸ್‍ಕ್ಲೂಸಿವ್ ರಿಪೋರ್ಟ್
ಇಲ್ಲಿದೆ.

ವಿಕ್ಟೋರಿಯಾ ಮತ್ತು ಬೋರಿಂಗ್ ಆಸ್ಪತ್ರೆಯಲ್ಲಿ ಒಟ್ಟು 360 ಬೆಡ್‍ಗಳಿವೆ. ಅದರಲ್ಲಿ 355 ಭರ್ತಿಯಾಗಿದ್ದು, 05 ಬೆಡ್ ಮಾತ್ರ ಖಾಲಿ ಇದೆ. ಬೆಂಗಳೂರಿನ 12 ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 872 ಬೆಡ್‍ಗಳಿವೆ. ಅದರಲ್ಲಿ 791 ಭರ್ತಿಯಾಗಿದ್ದು, 81 ಬೆಡ್ ಮಾತ್ರ ಬಾಕಿ ಉಳಿದಿವೆ. 9 ಖಾಸಗಿ ಮೆಡಿಕಲ್ ಕಾಲೇಜ್‍ಗಳಲ್ಲಿ ಒಟ್ಟು 947 ಬೆಡ್‍ಗಳಿವೆ. 685 ಬೆಡ್ ಭರ್ತಿಯಾಗಿದ್ದು, ಕೇವಲ 272 ಬೆಡ್ ಮಾತ್ರ ಬಾಕಿ ಉಳಿದಿವೆ

17 ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು ಬೆಡ್ 704 ಗಳಿವೆ ಈಗಾಗಲೇ 222 ಬೆಡ್ ಭರ್ತಿಯಾಗಿದ್ದು, 482 ಬೆಡ್ ಮಾತ್ರ ಉಳಿದುಕೊಂಡಿವೆ. ಎರಡು ಕೊವೀಡ್ ಕೇರ್ ಸೆಂಟರ್‍ಗಳಿವೆ. ಇಲ್ಲಿ ಒಟ್ಟು 578 ಬೆಡ್‍ಗಳಿದ್ದು, 419 ಬೆಡ್ ಭರ್ತಿಯಾಗಿ 159 ಬೆಡ್ ಮಾತ್ರ ಖಾಲಿ ಇದೆ.

ಸದ್ಯ ಕೇವಲ 30% ಬೆಡ್ ಮಾತ್ರ ಖಾಲಿ ಇದೆ. ಒಟ್ಟು ಬೆಡ್ 3461 ಗಳಿಇವೆ. ಅದರಲ್ಲಿ 2454 ಬೆಡ್ ಭರ್ತಿಯಾಗಿ 1007 ಬೆಡ್ ಮಾತ್ರ ಖಾಲಿ ಇವೆ. ಬೆಂಗಳೂರಿನಲ್ಲಿ ದಿನ ನಿತ್ಯ 6 ಸಾವಿರ ಕೇಸ್ ಬಂದರೆ ಬೆಡ್ ಸಮಸ್ಯೆ ಆಗುವುದು ಖಚಿತವಾಗಿದೆ.

ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಕೊರತೆ ಉಂಟಾಗುತ್ತಿದೆ. ಒಟ್ಟು 12 ಸರ್ಕಾರಿ ಆಸ್ಪತ್ರೆ ಮತ್ತು ಎರಡು ಸರ್ಕಾರಿ ಮೆಡಿಕಲ್ ಕಾಲೇಜ್‍ಗಳಲ್ಲಿ ಬೆಡ್‍ಗಳೇ ಇಲ್ಲವಾಗಿದೆ.12 ಸರ್ಕಾರ ಆಸ್ಪತ್ರೆ , ಎರಡು ಮೆಡಿಕಲ್ ಆಸ್ಪತ್ರೆಯಲ್ಲಿ 91 ಬೆಡ್ ಮಾತ್ರ ಖಾಲಿ ಇವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಆದರೆ ಬಡ ಜನ ಎಲ್ಲಿ ಹೋಗಬೇಕು. ಖಾಸಗಿ ಆಸ್ಪತ್ರೆ ಅವರು ಬೆಡ್ ಕೊಡದೇ ನೆಪ ಹೇಳ್ತಾ ಇದ್ದಾರೆ. ಕೊವಿಡ್ ಕೇರ್ ಸೆಂಟರ್ ಹೆಚ್ಚಳ ಮಾಡದೇ ಇದ್ದರೆ ಸಾವಿನ ಸುಳಿಯಲ್ಲಿ ಬೆಂಗಳೂರು ಮುಂದೆ ತಲುಪುವ ಸ್ಥಿತಿ ಬಂದೊದಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *