‘ಕೊರೊನಾ ವೈರಸ್’ ಸಿನಿಮಾ ಟ್ರೇಲರ್‌ನೊಂದಿಗೆ ಭಯ ಹುಟ್ಟಿಸುತ್ತಿರೋ ಆರ್‌ಜಿವಿ!

ಹೈದರಾಬಾದ್: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಲ್ಲಿರುವ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ (ಆರ್‌ಜಿವಿ) ಸಮಾಜದಲ್ಲಿ ಟ್ರೆಂಡಿಂಗ್‍ನಲ್ಲಿರುವ ವಿಚಾರಗಳೊಂದಿಗೆ ಸಿನಿಮಾ ಮಾಡಿ ಹಲವು ಬಾರಿ ಗೆಲುವು ಪಡೆದಿದ್ದಾರೆ. ಸದ್ಯ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಕುರಿತು ರಾಮ್‍ಗೋಪಾಲ್ ವರ್ಮಾ ಫೀಚರ್ ಫಿಲ್ಮ್ ಮಾಡಿರುವುದಾಗಿ ತಿಳಿಸಿದ್ದಾರೆ.

ಇಂದು ಆರ್‌ಜಿವಿ ತಮ್ಮ ಹೊಸ ಸಿನಿಮಾ ‘ಕೊರೊನಾ ವೈರಸ್’ ಟ್ರೇಲರನ್ನು ಯೂಟ್ಯೂಬ್‍ನಲ್ಲಿ ಬಿಟುಗಡೆ ಮಾಡಿದ್ದು, 4 ನಿಮಿಷ ಅವಧಿಯ ಟ್ರೇಲರ್ ನೋಡುತ್ತಿದ್ದಂತೆ ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವಂತಿದೆ.

ಟ್ರೇಲರ್ ಬಿಡುಗಡೆ ಕುರಿತು ಮಾಹಿತಿ ನೀಡಿರುವ ಆರ್‌ಜಿವಿ, ಕೊರೊನಾ ವೈರಸ್ ಚಿತ್ರ ನಿಮ್ಮೆಲ್ಲರೊಳಗಿರುವ ಭಯದ ಕುರಿತಾದ ಚಿತ್ರವಾಗಿದೆ. ಇದು ರೋಗ ಮತ್ತು ಸಾವಿನ ಭಯದ ವಿರುದ್ಧವಾಗಿ ಪ್ರೀತಿಯ ಶಕ್ತಿಯನ್ನು ಪರೀಕ್ಷಿಸುತ್ತದೆ. ನಮ್ಮ ಕೆಲಸವನ್ನು ಆ ದೇವರೊಂದಿಗೆ ಕೊರೊನಾ ಕೂಡ ನಿಲ್ಲಿಸಲು ಸಾಧ್ಯವಾಗಿಲ್ಲ ಎಂಬುವುದನ್ನು ನಿರೂಪಿಸಿಕೊಳ್ಳೋಣ ಎಂದುಕೊಂಡೆವು. ವಿಶ್ವದಲ್ಲೇ ಕೊರೊನಾ ವೈರಸ್ ಕುರಿತು ತೆಗೆದ ಮೊದಲ ಸಿನಿಮಾ ಇದಾಗಿದೆ. ನಮ್ಮ ನಟರು, ತಂತ್ರಜ್ಞಾನರು ತಮ್ಮ ಕ್ರಿಯೇಟಿವಿಟಿಯನ್ನು ತೆರೆದಿಟ್ಟಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮವರು ಲಾಕ್‍ಡೌನ್ ಆಗಿಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *