ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಲಿರುವ ಬಿಗ್‍ಬಾಸ್ ಸ್ಪರ್ಧಿಗಳು

ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ವಾಸ್ತವ ದರ್ಶನ ಮಾಡಿಸಿದ ಬಳಿಕ ಬಿಗ್ ಬಾಸ್ ಕಾರ್ಯಕ್ರಮ ರದ್ದಾಗುತ್ತಿರುವ ವಿಚಾರವನ್ನು ಸ್ಪರ್ಧಿಗಳಿಗೆ ತಿಳಿಸಲಾಯಿತು. ಲಾಕ್‍ಡೌನ್ ಹೇರಿಕೆಯಿಂದಾಗಿ ಬಿಗ್‍ಬಾಸ್ ಕನ್ನಡ 8 ಕಾರ್ಯಕ್ರಮ ಸ್ಥಗಿತಗೊಂಡಿದೆ.

ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಭೀಕರತೆ ಬಗ್ಗೆ ಮನದಟ್ಟಾದ ಬಳಿಕ, ನಮ್ಮೆಲ್ಲರ ಸುರಕ್ಷತೆಗಾಗಿ ಈ ಶೋ ಎಂಡ್ ಮಾಡುತ್ತಿದ್ದೀರಾ. ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೀರಾ ಎಂದು ಸ್ಪರ್ಧಿಗಳೆಲ್ಲಾ ಬಿಗ್ ಬಾಸ್‍ಗೆ ಧನ್ಯವಾದ ಅರ್ಪಿಸಿದರು.

ಬಳಿಕ ಕೋವಿಡ್ ಕಾರಣದಿಂದ ಸಂಕಷ್ಟದಲ್ಲಿ ಸಿಲುಕಿರುವ ಅನೇಕರಿಗೆ ಸಹಾಯ ಮಾಡುವುದಾಗಿಯೂ ಬಿಗ್ ಬಾಸ್ ಸ್ಪರ್ಧಿಗಳು ಭರವಸೆ ನೀಡಿದರು. ನಾವೆಲ್ಲ ಕೊರೊನಾ ವಾರಿಯರ್ ಆಗಿ ಕೆಲಸ ಮಾಡ್ತೇವೆ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ನಟಿ ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಹಾಗೂ ಅರವಿಂದ್ ಹೇಳಿದರು.

17 ಸ್ಪರ್ಧಿಗಳು ಕೂಡ ಕೊರೊನಾ ವಾರಿಯರ್ ಆಗುತ್ತೇವೆ ಎಂದು ಸ್ಪರ್ಧಿಗಳು ಬಿಗ್ ಬಾಸ್‍ಗೆ ತಿಳಿಸಿದರು. ನಾನು ಮುಂಚೆಯೂ ಈ ಬಗ್ಗೆ ಕೆಲಸ ಮಾಡಿದ್ದೆ. ಈಗಲೂ ಕೆಲಸ ಮಾಡುತ್ತೇನೆ. ಜನರಿಗೆ ಸಹಾಯ ಮಾಡುತ್ತೇನೆ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದರು. ಬಿಗ್ ಬಾಸ್ ಕಾರ್ಯಕ್ರಮ ಸ್ಥಗಿತಗೊಂಡ ಬಳಿಕ ಸ್ಪರ್ಧಿಗಳೆಲ್ಲಾ ತಮ್ಮ ತಮ್ಮ ನಿವಾಸಗಳಿಗೆ ಹಿಂದಿರುಗಿದ್ದಾರೆ.

Comments

Leave a Reply

Your email address will not be published. Required fields are marked *