ರೆಮಿಡಿಸಿವರ್ ಔಷಧಕ್ಕೆ ಮುಗಿಬಿದ್ದ ಜನ

ಚೆನ್ನೈ: ಕೊರೊನ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ ಜನರು ಚೆನ್ನೈನಲ್ಲಿ ರೆಮಿಡಿಸಿವರ್ ಚುಚ್ಚುಮದ್ದಿಗಾಗಿ ಸರದಿಯಲ್ಲಿ ನಿಂತಿರುವ ಸುದ್ದಿಯೊಂದು ಹರಿದಾಡುತ್ತಿದೆ.

ಜನರು ಗುಂಪುಗೂಡಬಾರದು ಎನ್ನುವ ಆದೇಶವಿದ್ದರೂ ಕೂಡ ಚೆನ್ನೈನ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜಿನ ಹೊರಗೆ ರೆಮ್ಡೆಸಿವಿರ್ ಸಂಗ್ರಹಿಸಲು ಹಲವಾರು ಜನರು ಜಮಾಯಿಸಿದ್ದರು. ಇದರಿಂದ ಮತ್ತೆ ಕೊರೊನಾ ಹರಡುವ ಆತಂಕ ಎದುರಾಗಿದೆ. ಕೋವಿಡ್ ರೋಗಿಗಳಿಗೆ ಸಾಮಾನ್ಯವಾಗಿ ನೀಡುವ ಚಿಕಿತ್ಸೆಯಲ್ಲಿ ಬಳಸುವ ಸಂಭಾವ್ಯ ಔಷಧಿ ಈ ರೆಮಿಡಿಸಿವರ್. ಹಾಗಾಗಿ ಇದನ್ನ ಕೊಂಡುಕೊಳ್ಳುವಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಕೋವಿಡ್ ಪ್ರಕರಣಗಳು ದೇಶಾದ್ಯಂತ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೋವಿಡ್ ನಿಂದ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೆ ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ತಮಿಳುನಾಡು ಸರಕಾರ ಎರಡು ವಾರಗಳ ಕಾಲ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿದೆ.

Comments

Leave a Reply

Your email address will not be published. Required fields are marked *