– 11 ಜಿಲ್ಲೆಗಳಲ್ಲಿ ನೂರರ ಗಡಿ ದಾಟಿದ ಕೊರೊನಾ
– ಬೆಂಗಳೂರಿನಲ್ಲಿ 2125, ದ.ಕನ್ನಡ 509 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರುದ್ರ ತಾಂಡವ ಮುಂದುವರಿದಿದ್ದು, ಇವತ್ತು 4,537 ಹೊಸ ಪ್ರಕರಣಗಳು ದಾಖಲಾಗಿವೆ. ಇಂದು ರಾಜ್ಯದ 11 ಜಿಲ್ಲೆಗಳಲ್ಲಿ ಮಹಾಮಾರಿ ನೂರರ ಗಡಿಯನ್ನು ದಾಟಿದೆ.

ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಇವತ್ತು ಸಹ 2 ಸಾವಿರದ ಗಡಿ ದಾಟಿದ್ದು, 2,125 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಇಂದು 49 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಇಂದು 93 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ರೆ ಕೊರೊನಾ ನಿಯಂತ್ರಣ ಅಸಾಧ್ಯ. ಹಾಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

ಇಂದು 1,018 ಜನರು ಡಿಸ್ಚಾರ್ಜ್ ಆಗಿದ್ದು, 580 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 59,652ಕ್ಕೇ ಏರಿಕೆಯಾಗಿದ್ದು, 36,631 ಸಕ್ರಿಯ ಪ್ರಕರಣಗಳಿವೆ. 93 ಜನರನ್ನು ಕೊರೊನಾ ಬಲಿ ಪಡೆದಿದ್ದು, ಮಹಾಮಾರಿಯಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 1240 ಆಗಿದೆ.
ಇಂದಿನ ಪತ್ರಿಕಾ ಪ್ರಕಟಣೆ 18/07/2020.
ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಕೆಳಗೆ ಈ ಲಿಂಕನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/MApkJRIVwl pic.twitter.com/Wt0PXRqDXO— Karnataka Health Department (@DHFWKA) July 18, 2020
ಇಂದಿನ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು 2125, ದಕ್ಷಿಣ ಕನ್ನಡ 509, ಧಾರವಾಡ 186, ವಿಜಯಪುರ 176, ಬಳ್ಳಾರಿ 155, ಬೆಳಗಾವಿ 137, ಉತ್ತರ ಕನ್ನಡ 116, ಶಿವಮೊಗ್ಗ 114, ಉಡುಪಿ 109, ಚಿಕ್ಕಬಳ್ಳಾಪುರ 107, ಮೈಸೂರು 101, ಬೆಂಗಳೂರು ಗ್ರಾಮಾಂತರ 94, ಕಲಬುರಗಿ 82, ಗದಗ 82, ಬೀದರ್ 72, ದಾವಣಗೆರೆ 56, ಹಾಸನ 51, ಮಂಡ್ಯ 42, ಕೋಲಾರ 35, ಚಾಮರಾಜನಗರ 34, ತುಮಕೂರು 24, ಚಿಕ್ಕಮಗಳೂರು 24, ಚಿತ್ರದುರ್ಗ 22, ರಾಯಚೂರು 16, ಹಾವೇರಿ 15, ಚಾಗಲಕೋಟೆ 13, ಕೊಪ್ಪಳ 13, ರಾಮನಗರ 13, ಕೊಡಗು 10 ಮತ್ತು ಯಾದಗಿರಿಯಲ್ಲಿ 4 ಪ್ರಕರಣಗಳು ವರದಿಯಾಗಿವೆ.

Leave a Reply