-ಧಾರಾವಿಯಲ್ಲಿ ಕೊರೊನಾ ಕಂಟ್ರೋಲ್ ಗೆ ನಾಲ್ಕು ಸೂತ್ರ
ಮುಂಬೈ: ಒಂದು ಲಕ್ಷ ಕೊರೊನಾ ಸೋಂಕಿತರ ಗಡಿ ದಾಟಿರುವ ಮುಂಬೈನಲ್ಲಿ ಕೊರೊನಾ ಹಾಟ್‍ಸ್ಪಾಟ್ ಆಗಿದ್ದು ಧಾರವಿ ಸ್ಲಂ. ಇಲ್ಲಿ ಕಾಣಿಸಿಕೊಂಡಿದ್ದ ಸೋಂಕು ಇಡೀ ಮುಂಬೈಗೆ ರಾಕೆಟ್ ವೇಗದಲ್ಲಿ ಹಬ್ಬಿತ್ತು. ಆದರೆ ಈ ಸೋಂಕು ಅದೇ ಸ್ಪೀಡ್‍ನಲ್ಲಿ ಇಳಿಕೆಯಾಗಿದೆ.
ಬಾಲಿವುಡ್ ಚಿತ್ರಗಳನ್ನು ನೋಡುವ ಮಂದಿಗೆ ಮುಂಬೈನ ಧಾರಾವಿ ಸ್ಲಂನ ಪರಿಚಯ ಇದ್ದೇ ಇರುತ್ತದೆ. ಈ ಸ್ಲಂ ನಾ ವ್ಯಾಪ್ತಿ ಇರುವುದು ಕೇವಲ 2.1 ಚದರ ಕಿಲೋಮೀಟರ್. ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾಗಿರುವ ಈ ಕೊಳೆಗೇರಿಯಲ್ಲಿ ಕೊರೊನಾ ರುದ್ರ ನರ್ತನ ಮಾಡಿತ್ತು. ಅರ್ಧ ಮುಂಬೈಗೆ ಈ ಸ್ಲಂ ಸೋಂಕು ಹಬ್ಬಿಸಿತ್ತು. ಹೀಗೆ ಮುಂಬೈನ ಕಾಡಿದ್ದ ಧಾರಾವಿ ಕೊರೊನಾ ಮುಕ್ತವಾಗುತ್ತ ಹೆಜ್ಜೆ ಹಾಕುತ್ತಿದೆ.

ನಾಲ್ಕು ಸೂತ್ರಗಳು: ಭಾರತದಲ್ಲಿ ಕೊರೊನಾ ಸೋಂಕು ಹರಡುವಿಕೆಯ ಆರಂಭಿಕ ದಿನಗಳಲ್ಲಿ ಹೆಚ್ಚು ಭಯ ಸೃಷ್ಟಿಸಿದ್ದೆ ಮುಂಬೈನ ಧಾರಾವಿ ಸ್ಲಂನಲ್ಲಿ ರಾಕೇಟ್ ವೇಗದಲ್ಲಿ ಕೊರೊನಾ ಹಬ್ಬುತ್ತಿತ್ತು. ಏಪ್ರಿಲ್‍ನಲ್ಲಿ ಕೊರೊನಾ ಸೋಂಕು 491 ಮಂದಿಯ ಹಬ್ಬಿತ್ತು. ಮೇ ತಿಂಗಳಲ್ಲಿ 1,216 ಏರಿಕೆಯಾಗಿತ್ತು. ಬರೋಬ್ಬರಿ 80 ಮಂದಿ ಸೋಂಕು ಬಲಿಪಡೆದಿತ್ತು. ಇಡೀ ಧಾರಾವಿ ಸ್ಲಂ ಕೊರೊನಾ ಕೂಪವಾಗುತ್ತೆ ಎಂಬ ಆತಂಕ ಶುರುವಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ, ಧಾರಾವಿಯಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿದೆ. ಕಳೆದ ತಿಂಗಳಲ್ಲಿ 274 ಪ್ರಕರಣಗಳು ದಾಖಲಾಗಿ 6 ಮಂದಿ ಮೃತಪಟ್ಟಿದ್ದಾರೆ. ಈಗ ಸೋಂಕಿತರ ಗ್ರಾಫ್ ಒಮ್ಮಲೆ ಇಳಿಕೆಯಾಗಿದೆ. ಈ ಅಚ್ಚರಿಯ ಯಶಸ್ಸಿಗೆ ಕಾರಣವಾಗಿದ್ದು ನಾಲ್ಕು ಸೂತ್ರಗಳು.

ಮುಂಬೈ ನಗರ ಪಾಲಿಕೆ ಧಾರಾವಿ ಸ್ಲಂ ಮೇಲೆ ವಿಶೇಷ ಕಾಳಜಿ ವಹಿಸಿತ್ತು. ಕೊರೊನಾ ನಿಯಂತ್ರಣಕ್ಕೆ ಟ್ರೇಸಿಂಗ್, ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರೀಟಿಂಗ್ ಅಂತಾ ನಾಲ್ಕು ಸೂತ್ರಗಳನ್ನು ಅಳವಡಿಕೊಂಡಿತ್ತು. ಕೊರೊನಾ ಸೋಂಕಿತರನ್ನು ಕಂಡುಹಿಡಿಯುವುದು, ಸಂಪರ್ಕ ಪತ್ತೆಹಚ್ಚುವುದು, ಪರೀಕ್ಷಿಸುವುದು ಮತ್ತು ಚಿಕಿತ್ಸೆ ಕೊಡುವುದನ್ನು ಪಾಲಿಕೆ ನಿರಂತರವಾಗಿ ಮಾಡಿತ್ತು, ಸದ್ಯವೂ ಈ ಕೆಲಸದಲ್ಲಿ ತೊಡಗಿಕೊಂಡಿದೆ.

ಈ ಕೊಳೆಗೇರಿಯ ಭಯಾನಕತೆ ಮತ್ತು ಸ್ಫೋಟದ ತೀವ್ರತೆ ಅರಿತಿದ್ದ ವೈದ್ಯಕೀಯ ಸಿಬ್ಬಂದಿ ಮನೆ ಮನೆಗೆ ಹೋಗಿ ಜನರನ್ನು ಪರೀಕ್ಷೆ ಮಾಡಿದ್ದಾರೆ. ಸಂಚಾರಿ ವ್ಯಾನ್‍ಗಳ ಮೂಲಕ ಎಲ್ಲರನ್ನೂ ಪರೀಕ್ಷಿಸುವ ಕಾರ್ಯ ನಡೆದಿದ್ದಾರೆ. ಬಿಎಂಸಿ ಆರೋಗ್ಯ ಸೇವಾ ಕಾರ್ಯಕರ್ತರು 4.76 ಲಕ್ಷ ಮಂದಿಯನ್ನು ಇಲ್ಲಿಯವರೆಗೆ ಸಂಪರ್ಕಿಸಿದ್ದಾರೆ.

ಇಷ್ಟಯ ಅಲ್ಲದೇ ಅಲ್ಲಲ್ಲಿ ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗಿದೆ. 3.6 ಲಕ್ಷ ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಡೇಂಜರ್ ಸ್ಥಿತಿಯಲ್ಲಿ ಇರುವ 8,246 ಹಿರಿಯ ನಾಗರಿಕರನ್ನು ಗುರುತಿಸಲಾಗಿದ್ದು, ಅವರನ್ನು ಉಳಿದವರಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ಸುಮಾರು ಆರು ಲಕ್ಷ ಮಂದಿಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಸುಸಜ್ಜಿತವಾದ ಕೊರೊನಾ ಕೇರ್ ಹಾಗೂ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. 2,450 ಮಂದಿ ಆರೋಗ್ಯ ಕಾರ್ಯಕರ್ತರನ್ನು ಧಾರಾವಿ ಪ್ರದೇಶವೊಂದಕ್ಕೇ ನಿಯೋಜಿಸಲಾಗಿದೆ. ಹೀಗಾಗಿ ಕೊರೊನಾ ಕಂಟ್ರೋಲ್ ಗೆ ಬಂದಿದೆ ಎಂದು ವರದಿಯಾಗಿದೆ.

ಈ ನಡುವೆ ಬೆಂಗಳೂರಿನಲ್ಲೂ ಸೋಂಕು ಹೆಚ್ಚಾಗ್ತಿದೆ. ಸಿಲಿಕಾನ್ ಸಿಟಿಯ ಸ್ಲಂಗಳಲ್ಲೋ ಸೋಂಕು ಕಾಣಿಸಿಕೊಳ್ತಿದೆ. ಈ ಸ್ಲಂ ಗಳನ್ನು ಟಾರ್ಗೆಟ್ ಮಾಡಿ ಧಾರಾವಿ ಸ್ಲಂನಲ್ಲಿ ಅಳವಡಿಸಿದ ಮಾದರಿಯನ್ನು ವಿಶೇಷ ಆಸಕ್ತಿಯನ್ನು ಸರ್ಕಾರ ತೋರಿಸಿದ್ದೇಲೆ ಬೆಂಗಳೂರಿನಲ್ಲಿ ಮುಂದಾಗಬಹುದಾದ ದೊಡ್ಡ ಅನಾಹುತ ತಡೆಯಬಹುದಾಗಿದೆ.

Leave a Reply