ಕೊರೊನಾ ಮಧ್ಯೆ 3 ಕ್ಷೇತ್ರಗಳಿಗೆ ಉಪ ಚುನಾವಣೆ- ಕರ್ತವ್ಯಕ್ಕೆ ಬಾರದ 29 ಮಂದಿ ವಿರುದ್ಧ ಎಫ್‍ಐಆರ್

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಾದ ಬೆಳಗಾವಿ, ಮಸ್ಕಿ, ಬಸವಕಲ್ಯಾಣದ ಉಪಚುನಾವಣೆಗೆ ತೆರೆ ಬಿದ್ದಿದೆ.

ಬೆಳಗಾವಿಯಲ್ಲಿ ಶೇ.60, ಬಸವಕಲ್ಯಾಣ ಶೇ.65 ಹಾಗೂ ಮಸ್ಕಿಯಲ್ಲಿ ಶೇ.71ರಷ್ಟು ಮತದಾನವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಸೇರಿದಂತೆ ಕುಟುಂಬಸ್ಥರು ಮತ ಚಲಾಯಿಸಿ, ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.

ಗೋಕಾಕ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮತದಾನ ಮಾಡಿದ್ರು. ಸೋಂಕು ಪೀಡಿತ ಸವದತ್ತಿ ಶಾಸಕ ಆನಂದ್ ಮಾಮನಿ ಪಿಪಿಇ ಕಿಟ್ ಧರಿಸಿ ಓಟ್ ಮಾಡಿದ್ರು. ಆಸ್ಪತ್ರೆಯಲ್ಲಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ 9 ರಂದೇ ಅಂಚೆ ಮತ ಚಲಾಯಿಸಿದ್ದಾರೆ.

ರಾಯಚೂರಿನ ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‍ಗೌಡ ಪಿಪಿಇ ಕಿಟ್ ಧರಿಸಿ ಓಟ್ ಮಾಡಿದ್ರು. ತುರವಿಹಾಳ್ ಗ್ರಾಮದಲ್ಲಿ ಮತಯಂತ್ರದಲ್ಲಿನ ದೋಷದಿಂದ ಅರ್ಧ ಗಂಟೆ ಮತದಾನ ಸ್ಥಗಿತಗೊಳಿಸಲಾಯ್ತು. ನಂತರ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರವಿಹಾಳ ಮತ ಚಲಾಯಿಸಿದ್ರು.

ಚುನಾವಣಾ ಕರ್ತವ್ಯಕ್ಕೆ ಗೈರಾದ 29 ಮಂದಿ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಬೀದರ್‍ನ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಮತಚಲಾಯಿಸಿ ನೂರಕ್ಕೆ ನೂರು ಗೆಲ್ತೀನಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಇತ್ತ ಎಲೆಕ್ಷನ್ ನಡೆಯುತ್ತಿದ್ದ ಹೊತ್ತಲ್ಲೇ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನ ಬಿಜೆಪಿ ಉಚ್ಛಾಟಿಸಿದೆ. ಪಶ್ಚಿಮ ಬಂಗಾಳದಲ್ಲೂ 5ನೇ ಹಂತದಲ್ಲಿ ಶೇ.79ರಷ್ಟು ಮತದಾನವಾಗಿದೆ.

Comments

Leave a Reply

Your email address will not be published. Required fields are marked *