ಕೊರೊನಾ ಮಧ್ಯೆ ಬಜೆಟ್ – ದೇಶದ ಆರ್ಥಿಕತೆ ಚೇತರಿಕೆಗೆ ಸಿಗುತ್ತಾ ಮದ್ದು?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಜೆಟ್ ಇಂದು ಮಂಡನೆ ಆಗ್ತಿದೆ. ಒಂದು ವರ್ಷಗಳ ಕಾಲ ಹೆಮ್ಮಾರಿ ಕೊರೊನಾದಿಂದಾಗಿ ಇಡೀ ಪ್ರಪಂಚವೇ ಹೈರಾಣಾಗಿ ಹೋಗಿದೆ. ಭಾರತ ಕೂಡ ಜನತಾ ಕರ್ಫ್ಯೂ, ಲಾಕ್‍ಡೌನ್, ಸೀಲ್‍ಡೌನ್, ನೈಟ್ ಕರ್ಫ್ಯೂ, ಕಂಟೈನ್ಮೆಂಟ್ ಝೋನ್ ಹೀಗೆ ಎಲ್ಲಾ ಕಂಟ್ರೋಲ್ ಕ್ರಮಗಳನ್ನು ಕಂಡಿದೆ. ಇದರಿಂದಾಗಿ ದೇಶದ ಆರ್ಥಿಕತೆಗೆ ಹೇಳದಷ್ಟು ಹೊಡೆತವೇ ಬಿದ್ದೋಗಿದೆ. ಪ್ರಪಾತಕ್ಕೆ ಕುಸಿದಿರೋ ಆರ್ಥಿಕತೆಗೆ ಉತ್ತೇಜನ, ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಅತ್ಯಂತ ಕ್ಲಿಷ್ಟಕರ ಬಜೆಟ್ ಮಂಡಿಸುತ್ತಿದೆ ಎನ್ನಲಾಗಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕಷ್ಟಕರ ಬಜೆಟ್ ಇದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‍ಗೆ ಇಂದಿನ ಬಜೆಟ್ ಅಗ್ನಿಪರೀಕ್ಷೆಯೇ ಆಗಿದೆ. ಕೋವಿಡ್ ಅವಧಿಯಲ್ಲಿ ಮಧ್ಯ ಮಧ್ಯ ಕೆಲವೊಂದು ಆರ್ಥಿಕ ಪ್ಯಾಕೇಜ್‍ಗಳನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದರೂ ಕೂಡ ಅದು ಕಾಗದಗಳಲ್ಲೇ ಉಳಿದವು ಅನ್ನೋ ಟೀಕೆ ಎದುರಿಸಬೇಕಾಗಿತ್ತು. ಈಗ ಕೊರೊನಾ ವ್ಯಾಕ್ಸಿನ್, ರೈತರು, ಬಡ ವರ್ಗ-ಮಧ್ಯಮ ವರ್ಗ, ಆರೋಗ್ಯ, ರಕ್ಷಣೆ, ಉದ್ಯಮದ ಜೊತೆಗೆ ಆತ್ಮನಿರ್ಭರ ಭಾರತ ರೂಪಿಸುವ ಅತಿದೊಡ್ಡ ಸವಾಲು ಮುಂದಿದೆ. ಹಾಗಾಗಿ ಬಜೆಟ್ ಮೇಲೆ ಕೋಟ್ಯಂತರ ಭಾರತೀಯರು ಚಾತಕಪಕ್ಷಿಗಳ ರೀತಿ ನೋಟ ನೆಟ್ಟಿದ್ದಾರೆ.

ಕೊರೊನಾದಿಂದಾಗಿ ಈ ಬಾರಿಯ ಬಜೆಟ್ ಕಾಗದ ರಹಿತವಾಗಿರಲಿದೆ. ಬದಲಿಗೆ ಕೇಂದ್ರ ಬಜೆಟ್ ವೆಬ್‍ಸೈಟ್ <http://www.indiabudget.gov.in> ನಲ್ಲಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಲ್ಲಿ ಮೊಬೈಲ್‍ನಲ್ಲೇ ಬಜೆಟ್‍ನ 14 ದಾಖಲೆಗಳು ಲಭ್ಯವಾಗಲಿವೆ. ಆಂಡ್ರಾಯ್ಡ್ ಮತ್ತು ಐಎಸ್‍ಓ ಫ್ಲಾಟ್‍ಫಾರ್ಮ್‍ಗಳಲ್ಲೂ ಆ್ಯಪ್ ಲಭ್ಯ ಇದೆ.

Comments

Leave a Reply

Your email address will not be published. Required fields are marked *