ಕೊರೊನಾ ಬೇಗ ಹೋಗಲಿ ಎಂದು ಕಾಯುತ್ತಿರುವೆ: ರಶ್ಮಿಕಾ ಮಂದಣ್ಣ

ಬೆಂಗಳೂರು: ಕೊರೊನಾ ಲಾಕ್‍ಡೌನ್ ನಿಂದ ಮನೆಯಲ್ಲಿ ಕಾಲಕಳೆಯುತ್ತಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಕೊರೊನಾ ಆದಷ್ಟು ಬೇಗ ಹೋಗಲಿ ಎಂದು ಕಾಯುತ್ತಿರುವೆ ಎಂದು ಹೇಳುವ ಮೂಲಕವಾಗಿ ಅಭಿಮಾನಿಗಳಲ್ಲಿ ಕ್ಯೂರಾಸಿಟಿ ಹುಟ್ಟಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಮಂದಣ್ಣ ಲಾಕ್‍ಡೌನ್‍ನಲ್ಲೂ ತುಂಬಾನೇ ಸುದ್ದಿಯಲ್ಲಿದ್ದಾರೆ. ಮದುವೆ, ಸಿನಿಮಾ ಹೀಗೆ ಹಲವಾರು ವಿಷಯಗಳಿಂದ ಸದ್ದು ಮಾಡುತ್ತಿದ್ದಾರೆ. ಈಗ ಕೊರೊನಾ ಹೋಗಲಿ ಅಂತ ಕಾಯುತ್ತಿರುವುದಾಗಿ ಮುದ್ದಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.

ರಶ್ಮಿಕಾ ಮಂದಣ್ಣ  ಇತ್ತೀಚೆಗೆ ತಮ್ಮ ವಿಭಿನ್ನ ಲುಕ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಮನರಂಜನೆ ನೀಡುತ್ತಿದ್ದಾರೆ. ಈಗ ತಮ್ಮ ಬಾಲ್ಯದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಕೊರೊನಾ ಬೇಗ ಹೋಗಲಿ ಎಂದು ಕಾಯುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಇನ್‍ಸ್ಟಾಗ್ರಾಮ್ ಈ ಪೋಸ್ಟ್ ಕೂತುಹೊಲವನ್ನು ಮೂಡಿಸದೆ.

ಅಭಿಮಾನಿಗಳು ಮದುವೆ, ಸಿನಿಮಾ ಅಥವಾ ಹೊಸ ಪ್ರಾಜೇಕ್ಟ್ ಏನು..ಎಂದು ಕಮೆಂಟ್ ಮಾಡುತ್ತಿದ್ದಾರೆ. ರಶ್ಮಿಕಾ ಲಾಕ್‍ಡೌನ್ ಮುಗಿದ ಮೇಲೆ ಏನು ಮಾಡಲಿದ್ದಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ತೆಲುಗು, ಹಿಂದಿ, ತಮಿಳು ಒಂದರ ಹಿಂದೆ ಒಂದರಂತೆ ಸಿನಿಮಾಗಳು ರಶ್ಮಿಕಾ ಕೈಯಲ್ಲಿದೆ.

Comments

Leave a Reply

Your email address will not be published. Required fields are marked *