ಕೊರೊನಾ ಬಂದ ವ್ಯಕ್ತಿಗಳನ್ನ ಕೀಳಾಗಿ ಕಾಣಬೇಡಿ- ಪುಟ್ಟ ಬಾಲಕಿ ಮನವಿ

ಹಾವೇರಿ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರನ್ನ ನೋಡುವ ದೃಷ್ಟಿಕೋನ ಬೇರೆಯಾಗಿದೆ. ಆದರೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಅಕ್ಕಿಆಲೂರಿನ ಪುಟ್ಟ ಬಾಲಕಿಯೊಬ್ಬಳು ಮಹಾಮಾರಿ ಕೊರೊನಾ ಸೋಂಕಿನ ಬಗ್ಗೆ ಮನಮುಟ್ಟುವ ಸಂದೇಶವನ್ನು ನೀಡಿದ್ದಾಳೆ.

ಅಕ್ಕಿಆಲೂರು ಗ್ರಾಮದ ಬಾಲಕಿ ವಚನಾ ಚಿಲ್ಲೂರಮಠ ಜೈನ್ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕೊರೊನಾ ಕುರಿತು ಮಾನವೀಯ ಸಂದೇಶವನ್ನು ಸಾರಿದ್ದಾಳೆ.

ಗ್ರಾಮದ ಕೊರೊನಾ ವ್ಯಕ್ತಿಗಳನ್ನು ಸಮಾಜದಲ್ಲಿ ನೋಡುವ ದೃಷ್ಟಿ ಬದಲಾಗಿದೆ. ಕೊರೊನಾ ಬಂದ ವ್ಯಕ್ತಿಗಳನ್ನು ಕೀಳಾಗಿ ಕಾಣಬೇಡಿ. ಅವರು ನಮ್ಮಂತ ಮನಷ್ಯರಲ್ಲವೇ? ಕೊರೊನಾ ಬಂದವರು ಏನು ಕೊಲೆ ಮಾಡಿದವರೆ ಅಥವಾ ಅಪರಾಧಿಗಳೇ.? ಎಂದು ಪ್ರಶ್ನಿಸಿದ್ದಾಳೆ. ಈ ಪುಟ್ಟಬಾಲಕೀಯ ವಿಡಿಯೋ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

 

Comments

Leave a Reply

Your email address will not be published. Required fields are marked *