ಕೊರೊನಾ ಪ್ರಕರಣ ಹೆಚ್ಚಳ, ಸಂಜೆ ಮಹತ್ವದ ಸಭೆ: ಸುಧಾಕರ್

ಬೆಂಗಳೂರು: ಜನ ಮಾತು ಕೇಳದಿದ್ದರೆ, ಕೊರೊನಾ ಕೇಸ್ ಏರಿಕೆಯಾದರೆ ಏನು ಮಾಡಬೇಕು ಹೇಳಿ. ಜನ ಎಚ್ಚರಿಕೆಯಿಂದ ಇರಬೇಕು. ಇಂದು ಸಂಜೆ ಸಿಎಂ ಜೊತೆ ಸಭೆ ಕರೆಯಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ದೇಶಗಳಲ್ಲಿ ಕೋವಿಡ್ ಹೆಚ್ಚುತ್ತಿದೆ. ಸಿಎಂ ನಿನ್ನೆ ಮಾರ್ಮಿಕವಾಗಿ ಸೂಚನೆ ಕೊಟ್ಟಿದ್ದಾರೆ. ನಾವು ಯಾವ ರೀತಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಾವು ಇಂದು ಚರ್ಚೆ ಮಾಡುತ್ತೇವೆ. ಜನರು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕಿದೆ. ಜನರು ನಿಯಮ ಪಾಲಿಸದಿದ್ದರೆ ಸರ್ಕಾರದ ಮುಂದೆ ಏನಿದೆ. ಸರ್ಕಾರ ಮಾತ್ರ ಏನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

ಲಾಕ್‍ಡೌನ್ ಮಾಡಬಾರದು ಎಂದೇ ಸರ್ಕಾರ ಯೋಚನೆ ಮಾಡುತ್ತಿದೆ. ಜನ ನಿಯಮ ಪಾಲನೆ ಮಾಡಲಿಲ್ಲ ಅಂದರೆ ಏನು ಮಾಡಲಿಕ್ಕೆ ಆಗಲ್ಲ. ಮಾಸ್ಕ್, ದಂಡ ಹೆಚ್ಚಳದ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಆಗಲಿದೆ. ನೈಟ್ ಕಫ್ರ್ಯೂ ಲಾಕ್ ಡೌನ್ ಸದ್ಯಕ್ಕೆ ಯೋಚನೆ ಕುರಿತಾಗಿ ಮಾಡಿಲ್ಲ. ಇಂದು ಸಂಜೆ ಸಿಎಂ ಜೊತೆ ಸಭೆ ಕರೆಯಲಾಗಿದೆ. ಸಂಜೆ ಎಲ್ಲವನ್ನೂ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು, ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳದೆ ಇರುವುದು ಮಾಡುತ್ತಿರಾ. ಸಭೆ ಸಮಾರಂಭ, ರಾಜಕೀಯ ಸಭೆ, ಧಾರ್ಮಿಕ ಸಭೆ ಮಾಡುವುದು ಜನ ಸೇರೆವುದು ಮಾಡಿದ್ದೀರಾ. ಕೊರೊನಾ ಸಂಖ್ಯೆ ಹೆಚ್ಚಾದಾಗ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸುತ್ತಿರಾ. ನಾವು ಎಷ್ಟು ಎಂದು ಕ್ರಮವನ್ನು ಕೈಗೊಳ್ಳು ಸಾಧ್ಯವಾಗುತ್ತದೆ. ಕೊರೊನಾ ಹೆಚ್ಚಾಗಲು ಕಾರಣ ಯಾರು ಎಂಬುದನ್ನು ನಾವು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

ಜನ ಎಚ್ಚರಿಕೆಯಿಂದ ಇರಬೇಕು. ಜನ ಮಾತು ಕೇಳದಿದ್ದರೆ ಏನು ಮಾಡಲು ಸಾಧ್ಯವಿಲ್ಲ. ಲಸಿಕೆಯನ್ನು ತೆಗೆದುಕೊಳ್ಳಿ. ನಿಮ್ಮೆಲ್ಲರ ಸಹಕಾರ ಮುಖ್ಯವಾಗುತ್ತದೆ. ಲಾಕ್ ಡೌನ್ ಮಾಡಬಾರದೆಂಬುದು ನಮ್ಮ ಉದ್ದೇಶ. ಜನ ಜವಾಬ್ದಾರಿ ಮರೆಯಬಾರದು ಅಂತಾ ಮನವಿ ಮಾಡ್ತೆವೆ ಎಂದು ಹೇಳುತ್ತಾ ಪರೋಕ್ಷವಾಗಿ ಲಾಕ್ ಡೌನ್ ಬಗ್ಗೆ ಸೂಚನೆಯನ್ನು ಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *