ಕೊರೊನಾ ಪಾಸಿಟಿವ್ ಬಂದ್ರೂ ಸಾರ್ವಜನಿಕವಾಗಿ ಟೀ ಕುಡಿದು ಹರಟೆ ಹೊಡೆದ ಪೊಲೀಸ್ ಸಿಬ್ಬಂದಿ

ಯಾದಗಿರಿ: ಕೊರೊನಾ ಪಾಸಿಟಿವ್ ಬಂದು, ಕೊವಿಡ್ ಆಸ್ಪತ್ರೆಗೂ ಹೋಗುವ ಮುನ್ನ ಪೊಲೀಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ಘಟನೆ ನಡೆದಿದೆ.

ಇಂದು ಗುರುಮಠಕಲ್ ಪಿಎಸ್ ಐ ಸೇರಿದಂತೆ 16 ಪೊಲೀಸ್ ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದೆ. ಈಗಾಗಲೇ ಠಾಣೆಯನ್ನು ಸೀಲ್ ಡೌನ್ ಸಹ ಮಾಡಲಾಗಿದೆ. ಹೀಗಾಗಿ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ಕರೆತರಲು ಸರ್ಕಾರಿ ಬಸ್ ಗುರುಮಿಠಕಲ್ ಪಟ್ಟಣಕ್ಕೆ ಹೋಗಿತ್ತು.

ಪಟ್ಟಣ ಸರ್ಕಲ್ ಇನ್ಸ್‍ಪೆಕ್ಟರ್ ಕಚೇರಿ ಎದುರು ಬಸ್ ನಿಂತಿದ್ದ ವೇಳೆ ಅದರಿಂದ ಕೆಳಗಿಳಿದ ಸಿಬ್ಬಂದಿ, ಬಸ್ ಪಕ್ಕದಲ್ಲಿದ್ದ ಟೀ ಅಂಗಡಿಗೆ ತೆರಳಿ, ಕೆಲ ಹೊತ್ತು ಟೀ ಕುಡಿಯುತ್ತಾ ಹರಟೆ ಹೊಡೆದಿದ್ದಾರೆ. ಇದು  ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಪೊಲೀಸರ ನಡೆಗೆ ಜಿಲ್ಲೆಯಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.

Comments

Leave a Reply

Your email address will not be published. Required fields are marked *