ಕೊರೊನಾ ಡೇಂಜರ್ ನಲ್ಲಿ ಕರ್ನಾಟಕದ 25 ತಾಲೂಕುಗಳು

ಬೆಂಗಳೂರು: ಕರ್ನಾಟಕದ 25 ತಾಲೂಕುಗಳು ಕೊರೊನಾ ಕಂಟಕದಲ್ಲಿವೆ. ರಾಜ್ಯದ 25 ತಾಲೂಕುಗಳಲ್ಲಿ ಶೇ.30 ಕ್ಕೂ ಹೆಚ್ಚು ಪಾಸಿಟಿವಿಟಿ ರೇಟ್ ಇದೆ.

25 ತಾಲೂಕುಗಳಲ್ಲಿ ಕೊರೊನಾ ಗಂಡಾಂತರದ ತೂಗುಗತ್ತಿ ಇರೋದರಿಂದ ಅನ್‍ಲಾಕ್ ಮಾಡಿದ್ರೆ ಮಹಾಮಾರಿ ಸ್ಫೋಟಗೊಳ್ಳುವ ಸಾಧ್ಯತೆಗಳಿವೆ. ಈ ತಾಲೂಕುಗಳಲ್ಲಿ ಮುಂದಿನ ಒಂದು ವಾರ ಕಠಿಣ ಲಾಕ್‍ಡೌನ್ ಇರುವಂತೆ ನೋಡಿಕೊಳ್ಳಬೇಕು ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಅನ್‍ಲಾಕ್ ಘೋಷಣೆಯಾದ್ರೂ ಸರ್ಕಾರ ತಾಲೂಕುಗಳನ್ನ ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಯನ್ನ ಪ್ರಕಟಿಸಬೇಕು. ಇಲ್ಲವಾದ್ರೆ ಕೊರೊನಾ ಪಸರಿಸುವಿಕೆ ವೇಗ ಪಡೆದುಕೊಳ್ಳಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್

30% ಕ್ಕೂ ಹೆಚ್ಚು 25 ತಾಲೂಕುಗಳು
25% ರಿಂದ 30% – 13 ತಾಲೂಕುಗಳು
20% ರಿಂದ 25% – 19 ತಾಲೂಕುಗಳು
15% ರಿಂದ 20% – 24 ತಾಲೂಕುಗಳು
10% ರಿಂದ 15% – 37 ತಾಲೂಕುಗಳು
5% ರಿಂದ 10% – 25 ತಾಲೂಕುಗಳು
5% ಗಿಂತ ಕಡಿಮೆ – 38 ತಾಲೂಕುಗಳು

ಶೇಕಡಾ 30 ಕ್ಕೂ ಹೆಚ್ಚು ಪಾಸಿಟಿವಿಟಿ ದರ ಇರುವ ತಾಲೂಕುಗಳು..
ಸಿದ್ದಾಪುರ – ಉತ್ತರಕನ್ನಡ, ಶ್ರೀನಿವಾಸಪುರ – ಕೋಲಾರ, ಶಿವಮೊಗ್ಗ – ಶಿವಮೊಗ್ಗ, ದೊಡ್ಡಬಳ್ಳಾಪುರ- ಬೆಂಗಳೂರು ಗ್ರಾಮಾಂತರ, ಹೊಸಪೇಟೆ – ಬಳ್ಳಾರಿ, ದಾವಣಗೆರೆ – ದಾವಣಗೆರೆ, ಚಿತ್ರದುರ್ಗ- ಚಿತ್ರದುರ್ಗ, ಬೇಲೂರು- ಹಾಸನ, ಚನ್ನಗಿರಿ- ದಾವಣಗೆರೆ, ಹರಿಹರ – ದಾವಣಗೆರೆ, ಶ್ರೀರಂಗಪಟ್ಟಣ- ಮಂಡ್ಯ, ಹರಪನಹಳ್ಳಿ- ಬಳ್ಳಾರಿ, ಸಿಂದಗಿ – ವಿಜಯಪುರ

ಹೊನ್ನಾಳಿ – ದಾವಣಗೆರೆ, ಕೂಡ್ಲಿಗಿ – ಬಳ್ಳಾರಿ, ಸಕಲೇಶಪುರ – ಹಾಸನ, ಹುಣಸಗಿ – ಯಾದಗಿರಿ, ಎನ್ ಆರ್ ಪುರ – ಚಿಕ್ಕಮಗಳೂರು, ಚನ್ನಪಟ್ಟಣ- ರಾಮನಗರ, ಶಿರಸಿ – ಉತ್ತರಕನ್ನಡ, ಪಿರಿಯಾಪಟ್ಟಣ – ಮೈಸೂರು, ಎಚ್ ಡಿ ಕೋಟೆ – ಮೈಸೂರು, ಕೆ ಆರ್ ನಗರ – ಮೈಸೂರು, ನಂಜನಗೂಡು- ಮೈಸೂರು, ಹುಣಸೂರು- ಮೈಸೂರು

Comments

Leave a Reply

Your email address will not be published. Required fields are marked *