ಕೊರೊನಾ ಕಾಲದಲ್ಲಿ ಸರ್ಕಾರದ ಸಾಧನೆಗಳು: ರಾಹುಲ್ ಗಾಂಧಿ ವ್ಯಂಗ್ಯ

-ಟ್ವಟ್ಟರ್ ನಲ್ಲಿ ಸರ್ಕಾರದ ವ್ಯಂಗ್ಯ ಮಾಡಿದ ರಾಗಾ

ನವದೆಹಲಿ: ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಟ್ವೀಟ್ ಮೂಲಕ ವ್ಯಂಗ್ಯ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳಿವು ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಫೆಬ್ರವರಿಯಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮಾರ್ಚ್ ನಲ್ಲಿ ಮಧ್ಯ ಪ್ರದೇಶದ ಸರ್ಕಾರ ಬೀಳಿಸಲಾಯಿತು. ಏಪ್ರಿಲ್ ನಲ್ಲಿ ಮೇಣದ ಬತ್ತಿ ಬೆಳಗಲು ಹೇಳಿದರು. ಇನ್ನೂ ಮೇನಲ್ಲಿ ಬಿಜೆಪಿ ಸರ್ಕಾರದ 6ನೇ ವರ್ಷದ ಸಂಭ್ರಮಾಚರಣೆ, ಜೂನ್ ನಲ್ಲಿ ಬಿಹಾರ ಚುನಾವಣೆಗಾಗಿ ವರ್ಚೂವಲ್ ಸಮಾವೇಶ ಮತ್ತು ಜುಲೈನಲ್ಲಿ ರಾಜಸ್ಥಾನ ಸರ್ಕಾರ ಉರುಳಿಸುವ ಪ್ರಯತ್ನ ಮಾಡಲಾಯ್ತು. ಹಾಗಾಗಿ ಈ ಎಲ್ಲ ಕಾರಣಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಸ್ವಾವಲಂಭಿ (ಆತ್ಮನಿರ್ಭರ)ವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ನಿನ್ನೆ ಒಟ್ಟು 37,148 ಹೊಸ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ 587 ಜನರನ್ನು ಕೋವಿಡ್ ಬಲಿ ಪಡೆದುಕೊಂಡಿದೆ. ಭಾರತದಲ್ಲಿ ಕೊರೊನಾ ಸೋಂಕಿಕತರ ಸಂಖ್ಯೆ 11,55,191ಕ್ಕೇರಿಕೆಯಾಗಿದ್ದು, 1.43 ಕೋಟಿ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

Comments

Leave a Reply

Your email address will not be published. Required fields are marked *