ಕೊರೊನಾ ಆತಂಕ- ಸಾಬೂನಿನಿಂದ ಕೊತ್ತಂಬರಿ ಸೊಪ್ಪು ತೊಳೆದ ಯುವತಿ

-ವಿಡಿಯೋ ವೈರಲ್, 4.6 ಕೋಟಿಗೂ ಅಧಿಕ ವ್ಯೂವ್

ಬೆಂಗಳೂರು: ಕೊರೊನಾ ಜೊತೆಗೆ ಜೀವನ ಸಾಗುತ್ತಿದ್ದು, ಜನರು ಆರೋಗ್ಯದ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಳ್ಳಬೇಕೆಂದು ಸರ್ಕಾರ ಸಲಹೆ ನೀಡುತ್ತಿದೆ. ಆದ್ರೆ ಯುವತಿ ಮಾರುಕಟ್ಟೆಯಿಂದ ತಂದ ಕೊತ್ತಂಬರಿ ಸೊಪ್ಪನ್ನು ಸಾಬೂನಿನಿಂದ ತೊಳೆದಿರುವ ವಿಡಿಯೋ ವೈರಲ್ ಆಗುತ್ತಿದೆ.

ಮನೆಗೆ ತಂದ ತರಕಾರಿ, ಹಣ್ಣುಗಳನ್ನು ಉಪ್ಪಿನ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ತೊಳೆದ್ರೆ ಉತ್ತಮ ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ. ಹೊರಗಿನಿಂದ ಮನೆಗೆ ಬರೋ ಮುನ್ನ ಸ್ಯಾನಿಟೈಸ್ ಬಳಕೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ನಿರ್ದೇಶನ ನೀಡಿದೆ. ಈ ಯುವತಿ ಮಾತ್ರ ಮನೆಗೆ ತಂದ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದಿದ್ದಾಳೆ. ಸೊಪ್ಪು ತೊಳೆಯುವುದನ್ನ ಟಿಕ್‍ಟಾಕ್ ನಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾಳೆ.

@1993pikachu

1st rank par agyi humari ye vedio 7 din huye upload kiya or 40million views and 1.6M likes..thank uh is vedio koi itna pyar dene ke #jabalpuriyamuser

♬ original sound – 𝔅𝔯𝔬𝔨𝔢𝔫 𝔖𝔬𝔲𝔩 💔….

ಕೆಲವು ದಿನಗಳ ಹಿಂದೆ ವಿಡಿಯೋ ಶೇರ್ ಮಾಡಲಾಗಿದ್ದು, 46 ಮಿಲಿಯನ್(4.6 ಕೋಟಿ)ಗೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಐದು ಸಾವಿರಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ. ಓರ್ವ ಬಳಕೆದಾರ, ನೀವು ಕೊತ್ತಂಬರಿ ಸೊಪ್ಪನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ತೊಳೆಯಿರಿ ಎಂದು ಉಚಿತ ಸಲಹೆ ನೀಡಿದ್ದಾನೆ. ಇನ್ನು ಕೆಲವರು ಹೀಗೆ ಫನ್ನಿ ಫನ್ನಿ ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಬಳಕೆದಾರ, ಈ ರೀತಿ ಸಾಬೂನಿನಿಂದ ತೊಳೆದ್ರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತೆ ಎಂದು ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *