ಕೊರೊನಾ ಅಂತ ಹೋಗಿ ಕಾಣಿಸಿಕೊಳ್ತು ಎದೆನೋವು – ಚಿಕಿತ್ಸೆ ವೇಳೆಯೇ ರಕ್ತಕಾರಿ ವ್ಯಕ್ತಿ ಸಾವು

ಬೆಂಗಳೂರು: ಕೊರೊನಾ ಚಿಕಿತ್ಸೆಗೆಂದು ದಾಖಲಾದ ಸೋಂಕಿತನಿಗೆ ಹೃದಯ ಸಂಬಂಧಿ ಸಮಸ್ಯೆ ಉಂಟಾಗಿ, ರಕ್ತಕಾರಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಡೆದಿದೆ.

26 ವರ್ಷದ ವ್ಯಕ್ತಿಯೊಬ್ಬರು ಆರ್‌ಟಿ ನಗರದ ಅಂಬೇಡ್ಕರ್ ಆಸ್ಪತ್ರೆಗೆ ಕೊರೊನಾ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ಹೀಗೆ ಅಡ್ಮಿಟ್ ಆಗಿ 20 ದಿನಗಳಾದ್ರೂ ಚೇತರಿಕೆ ಕಾಣಲಿಲ್ಲ. ನಂತರ ರೋಗಿಗೆ ಎದೆ ನೋವು ಶುರುವಾಗಿ ವೈದ್ಯರ ಸಲಹೆ ಮೇರೆಗೆ ಜಯದೇವ ಆಸ್ಪತ್ರೆಗೆ ಶಿಫ್ಟ್ ಆಗಿದ್ರು. ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಚಿಕಿತ್ಸೆಯೂ ನಡೆಯುತ್ತಿತ್ತು. ಆದರೆ ನಿನ್ನೆ ಏಕಾಏಕಿ ರಕ್ತಕಾರಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಶಿಕ್ಷಣ, ಕುಟುಂಬದ ಬಂಡಿ ಸಾಗಿಸಲು ಫುಡ್ ಡೆಲಿವರಿ ಗರ್ಲ್ ಆದ ವಿದ್ಯಾರ್ಥಿನಿ..!

ಕಣ್ಣೀರು ತರಿಸುತ್ತೆ ಕುಟುಂಬದ ಹಿನ್ನೆಲೆ:
ಪ್ರಕಾಶ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಗಾರೆ ಕೆಲಸ ಮಾಡ್ತಿದ್ದ ಈ ಮೃತ ಸೋಂಕಿತನಿಗೆ 7 ವರ್ಷದ ಮಗನಿದ್ದಾನೆ. ಸದ್ಯ ಪತ್ನಿ ಗರ್ಭಿಣಿ. ಸದ್ಯ ಆಸ್ಪತ್ರೆಯಿಂದ ಬನಶಂಕರಿಯ ಚಿತಾಗಾರಕ್ಕೆ ಮೃತದೇಹವನ್ನ ಶವ ಸಂಸ್ಕಾರಕ್ಕೆ ತಂದಿದ್ದು, ಪಿಪಿಇ ಕಿಟ್ ಧರಿಸಿಯೇ ಅಂತಿಮ ವಿಧಿ ವಿಧಾನಗಳನ್ನ ಮುಗಿಸಿದ್ದಾರೆ. ಮನೆಗೆ ಆಧಾರವಾಗಿದ್ದ ಪತಿಯನ್ನ ಕಳೆದುಕೊಂಡು ಇದೀಗ ಕುಟುಂಬ ಅನಾಥವಾಗಿದೆ.

Comments

Leave a Reply

Your email address will not be published. Required fields are marked *