ಕೊರೊನಾದಿಂದ ಮೃತಪಟ್ಟ ವ್ಯಕ್ತಿಯಿಂದ ಮೂವರಿಗೆ ಸೋಂಕು

– ಧಾರವಾಡದಲ್ಲಿ ದ್ವಿಶತಕ ಬಾರಿಸಿದ ಕೊರೊನಾ ಸಂಖ್ಯೆ

ಧಾರವಾಡ: ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರಿಗೆ ಕೊರೊನಾ ಧೃಡಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 200ಕ್ಕೆ ತಲುಪಿದೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದ ಮೂವರಿಗೆ ಸೋಂಕು ತಗುಲಿದ್ದು, ಇದೇ ಗ್ರಾಮದಲ್ಲಿ ಈಗಾಗಲೇ 31 ಜನರಿಗೆ ಸೋಂಕು ತಗುಲಿದೆ. ಕಳೆದ ಜೂನ್ 14 ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾದ ದಿನವೇ ಮೃತಪಟ್ಟಿದ್ದ 65 ವರ್ಷದ ವೃದ್ಧ ರೋಗಿ ನಂ.7060 ಯಿಂದ ಇಂದು ಮೂವರಿಗೆ ಕೊರೊನಾ ಧೃಡಪಟ್ಟದೆ.

ರೋಗಿ ನಂ.9158, 72 ವರ್ಷದ ಮಹಿಳೆ, 43 ವರ್ಷದ ಪುರುಷ ರೋಗಿ ನಂ.9159, 30 ವರ್ಷದ ಪುರುಷ ರೋಗಿ ನಂ.9160 ಇವರಿಗೆ ಮೃತ ವೃದ್ಧನಿಂದ ಸೋಂಕು ತಗುಲಿದೆ. ಅಲ್ಲದೆ ಧಾರವಾಡ ವಿಜಯನಗರದ ಮಹಿಳೆಗೆ ಐಎಲ್‍ಐದಿಂದ ರೋಗಿ ನಂ.9161 ಸೋಂಕು ಇದೆ ಎಂದು ತಿಳಿದು ಬಂದಿದ್ದು, ಸೋಂಕಿತೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಮೃತ ವೃದ್ಧನಿಂದ ಸೋಂಕು ತಗುಲಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

Comments

Leave a Reply

Your email address will not be published. Required fields are marked *