ಬೆಂಗಳೂರು: ಕೋವಿಡ್ ನಿಂದ ಮಣಿಪಾಲ್ ಆಸ್ಪತ್ರೆ ಸೇರಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ಲವಲವಿಕೆಯಿಂದ ಇದ್ದಾರೆ ಅಂತ ಮಣಿಪಾಲ್ ಆಸ್ಪತ್ರೆ ಹೆಲ್ತ್ ಬುಲೆಟಿನ್ ಹೇಳಿದೆ.
ಜ್ವರದ ಹಿನ್ನಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ
— B.S.Yediyurappa (@BSYBJP) April 16, 2021
ತಜ್ಞ ವೈದ್ಯರ ತಂಡ ಶ್ವಾಸಕೋಶದ ಮೇಲೂ ನಿಗಾ ಇರಿಸಲಾಗಿದೆ ಅಂದಿದೆ. ಸಿಎಂ ಮೊಮ್ಮಗಳು ಸೌಂದರ್ಯ ಮತ್ತು ಅವರ ಪತಿ ಡಾ.ನಿರಂಜನ್‍ರಿಗೂ ಪಾಸಿಟಿವ್ ಆಗಿದ್ದು, ಮಣಿಪಾಲದಲ್ಲಿ ಸಿಎಂ ಪಕ್ಕದ ವಾರ್ಡ್‍ನಲ್ಲೇ ದಾಖಲಿಸಲಾಗಿದೆ.
ಸಿಎಂ ಪ್ರಾಥಮಿಕ ಸಂಪರ್ಕಿತರಾಗಿರೋ ಡಿಸಿಎಂ ಲಕ್ಷ್ಮಣ ಸವದಿ ಗನ್‍ಮ್ಯಾನ್‍ಗೂ ಸೋಂಕು ದೃಢವಾಗಿದೆ. ಹಾಗಾಗಿ ತಾವು ಐಸೋಲೇಷನ್‍ನಲ್ಲಿರೋದಾಗಿ ಸವದಿ ತಿಳಿಸಿದ್ದಾರೆ. ಕೋವಿಡ್ ತೀವ್ರಗೊಂಡ ಕಾರಣ ವಿಧಾನಸೌಧ, ವಿಕಾಸಸೌಧಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಹೇರಲಾಗಿದೆ.

Leave a Reply