‘ಕೊಡೆಮುರುಗ’ನ ಎಂಟ್ರಿಗೆ ಡೇಟ್ ಫಿಕ್ಸ್ – ನಿರ್ದೇಶಕ ಸುಬ್ರಮಣ್ಯ ಪ್ರಸಾದ್‍ಗಿದು ಚೊಚ್ಚಲ ಸಿನಿಮಾ

ಹೊಸ ಕಾನ್ಸೆಪ್ಟ್, ಹೊಸ ಪ್ರಯತ್ನವನ್ನು ಸಿನಿರಸಿಕರು ಯಾವಾಗಲೂ ಬೆಂಬಲಿಸುತ್ತಾರೆ. ಈ ಭರವಸೆ ಇಟ್ಟುಕೊಂಡು ನಿರ್ಮಾಣವಾದ ಸಿನಿಮಾ ‘ಕೊಡೆಮುರುಗ’. ಸುಬ್ರಮಣ್ಯ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಈ ವಾರ ತೆರೆ ಮೇಲೆ ಪ್ರೇಕ್ಷಕ ಪ್ರಭುಗಳಿಗೆ ಮನರಂಜನೆ ನೀಡಲು ಬರ್ತಿದೆ.

ಹೀರೋ, ಹೀರೋಯಿಸಂ ಇದ್ಯಾವುದು ಇಲ್ಲದೆ ಕಥೆಯೇ ಹೀರೋ ಆಗಿರೋ ಕಾಮಿಡಿ ಕಚಗುಳಿ ಇಡುವ ಸಿನಿಮಾ ‘ಕೊಡೆಮುರುಗ’. ಸಿನಿಮಾ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಏನಪ್ಪಾ ಅಂದ್ರೆ ಚಿತ್ರದಲ್ಲಿನ ಖಳನಟನ ಹೆಸರನ್ನೇ ಸಿನಿಮಾ ಟೈಟಲ್ ಆಗಿ ಇಟ್ಟಿದ್ದಾರೆ ನಿರ್ದೇಶಕರು. ಟ್ರೇಲರ್ ಹಾಗೂ ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಸಖತ್ ಸೌಂಡ್ ಮಾಡಿದ್ದು ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ ಈ ಚಿತ್ರ.

ಕಿರುತೆರೆ ಹಿರಿತೆರೆಯಲ್ಲಿ ದುಡಿದ ಸಾಕಷ್ಟು ಅನುಭವ ಹೊಂದಿರುವ ಸುಬ್ರಮಣ್ಯ ಪ್ರಸಾದ್ ಚಿತ್ರದ ನಿರ್ದೇಶಕರು. ಮೊದಲ ಸಿನಿಮಾದಲ್ಲೇ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲಾ ಜವಾಬ್ದಾರಿಯನ್ನು ಹೊತ್ತಿರುವ ಇವರು ಸಿನಿಮಾ ತುಣುಕುಗಳಿಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿ ಸಖತ್ ಖುಷಿಯಾಗಿದ್ದಾರೆ. ನಿರ್ದೇಶನದ ಜೊತೆ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲೂ ಬಣ್ಣ ಹಚ್ಚಿದ್ದಾರೆ. ಸುಬ್ರಮಣ್ಯ ಪ್ರಸಾಸದ್. ಇವರ ಮೊದಲ ಪ್ರಯತ್ನಕ್ಕೆ ಸಾಥ್ ನೀಡಿದವರು ಚಿತ್ರದ ನಿರ್ಮಾಪಕರಾದ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ. ಸುಬ್ರಮಣ್ಯ ಪ್ರಸಾದ್ ಅವರ ಸಿನಿಮಾ ಕಥೆ ಕೇಳಿ ಥ್ರಿಲ್ ಆಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಇವರು.

ಸೂಪರ್ ಹಿಟ್ ಸೀರಿಯಲ್ ಅಗ್ನಿಸಾಕ್ಷಿಯಲ್ಲಿ ಖಳನಟನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಮುನಿಕೃಷ್ಣ ಹಾಗೂ ಚಿತ್ರದ ನಿರ್ದೇಶಕ ಸುಬ್ರಮಣ್ಯ ಪ್ರಸಾದ್ ಈ ಸಿನಿಮಾ ನಾಯಕ ನಟರು. ಸಮಾಜದಲ್ಲಿರುವ ಕೆಟ್ಟ ಹಾಗೂ ಒಳ್ಳೆಯ ಮುಖಗಳನ್ನು ಈ ಇಬ್ಬರು ನಾಯಕರು ಪ್ರತಿನಿಧಿಸಿದ್ದಾರೆ. ನಾಯಕಿಯಾಗಿ ಪಲ್ಲವಿ ಗೌಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಂ.ಎಸ್. ತ್ಯಾಗರಾಜ ಸಂಗೀತ ನಿರ್ದೇಶನ ಹಾಗೂ ರುದ್ರಮುನಿ ಬೆಳಗೆರೆ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಚಿತ್ರದ ಪ್ರಮುಖ ಹಾಡಿಗೆ ಖ್ಯಾತ ಗಾಯಕ ಕೈಲಾಶ್ ಖೇರ್ ದನಿಯಾಗಿದ್ದಾರೆ. ಕೆಆರ್‍ಕೆ ಬ್ಯಾನರ್‍ನಡಿ ನಿರ್ಮಾಣವಾದ ಈ ಸಿನಿಮಾ ಭರಪೂರ ಮನೋರಂಜನೆ ಜೊತೆ ಒಂದೊಳ್ಳೆ ಮೆಸೇಜ್ ಕೊಡೋಕೆ ಏಪ್ರಿಲ್ 9ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

Comments

Leave a Reply

Your email address will not be published. Required fields are marked *