ಕೊಡಗಿನಲ್ಲೂ ಹೆಚ್ಚುತ್ತಿದೆ ಬಿಸಿಲಿನ ತಾಪ

Weather

– ಬೇಸಿಗೆಗೂ ಮುನ್ನವೇ ಬಿಸಿಲ ಬಿಸಿ

ಮಡಿಕೇರಿ: ಇಲ್ಲಿನ ತಣ್ಣನೆ ಹವಾಮಾನದಿಂದಾಗಿ ಕೊಡಗನ್ನು ದಕ್ಷಿಣದ ಕಾಶ್ಮೀರ ಕರ್ನಾಟಕದ ಊಟಿ ಎಂದು ಕರೆಯಲಾಗುತ್ತದೆ. ಆದರೆ ಈ ವರ್ಷ ಕೊಡಗು ಸಖತ್ ಹಾಟ್ ಆಗ್ತಿದೆ. ಧಗ ಧಗನೆ ಉರಿಯುತ್ತಿರುವ ಸೂರ್ಯನ ತಾಪಕ್ಕೆ ತಣ್ಣನೆಯ ಮಡಿಕೇರಿ ಕೂಡ ಕರಗಿ ನೀರಾಗುತ್ತಿದೆ. ಬೆಳಗ್ಗೆ ಕೆಲವೆಡೆ ಚಳಿ, ಮಂಜು ಕವಿದ ವಾತಾವರಣವಿದ್ದರೂ 10 ಗಂಟೆಯ ನಂತರ ಸೂರ್ಯ ಪ್ರಜ್ವಲಿಸಲು ಶುರು ಮಾಡುತ್ತಾನೆ. ಮಧ್ಯಾಹ್ನ ನೆತ್ತಿ ಸುಡುವಂತಹ ಬಿಸಿಲಿನ ಅನುಭವ ಜಿಲ್ಲೆಯಲ್ಲಿ ಆಗುತ್ತಿದೆ.

ಪಶ್ಚಿಮಘಟ್ಟ ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿರುವ ಕೊಡಗು ಜಿಲ್ಲೆ ಹವಮಾನಕ್ಕೆ ಹೆಸರಾದ ಜಿಲ್ಲೆಯಾಗಿದೆ. ಆದರಲ್ಲೂ ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾಗಿದೆ. ಆದರೆ ಈ ವರ್ಷ ಇಲ್ಲೂ ಕೂಡ ತಾಪಮಾನದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಸಮುದ್ರ ಮಟ್ಟದಿಂದ ತುಂಬಾ ಎತ್ತರದಲ್ಲಿದ್ದು, ಸೂರ್ಯ ತನ್ನ ಚುರುಕು ಮುಟ್ಟಿಸಿದ್ದಾನೆ. ಜಿಲ್ಲೆಯ ಎಲ್ಲೆಡೆ ಕಳೆದ ವರ್ಷಕ್ಕಿಂತ ಈ ಬಾರಿ ತಾಪಮಾನ ಅತೀ ಹೆಚ್ಚು ಏರಿಕೆಯಾಗಿದೆ.

ಬೆಳಗ್ಗೆ ಕೆಲವೆಡೆ ಚಳಿ, ಮಂಜು ಕವಿದ ವಾತಾವರಣವಿದ್ದರೂ 10 ಗಂಟೆಯ ಸುಮಾರಿಗೆ ಸೂರ್ಯ ಪ್ರಜ್ವಲಿಸಲು ಶುರು ಮಾಡುತ್ತಾನೆ. ಮಧ್ಯಾಹ್ನ ನೆತ್ತಿ ಸುಡುವಂತಹ ಬಿಸಿಲಿನ ಅನುಭವ ಆಗುತ್ತಿದೆ. ಅಲ್ಲದೆ ಮೂರು ವರ್ಷದಿಂದ ಕೊಡಗಿನಲ್ಲಿ ಪ್ರಕೃತಿಕ ವಿಕೋಪದಿಂದ ಸಮತೋಲನದಲ್ಲಿ ಏರುಪೇರುಗಳು ಅಗುತ್ತಿದ್ದು, ಈ ರೀತಿಯ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಇಡೀ ಮಡಿಕೇರಿಯಲ್ಲಿ ಮರಳುಗಾಡಿನಲ್ಲಿ ಬೀಸುವ ಬಿಸಿ ಗಾಳಿಯಂತೆ ಬಿಸಿಲು ಹೆಚ್ಚಾಗಿದೆ. ಬಿಸಿಲಿನ ತಾಪಮಾನ ತಡೆಯಲು ಕೆಲವರು ತಂಪುಪಾನೀಯಗಳ ಮೊರೆ ಹೋಗಿದ್ದಾರೆ. ಎಳನೀರು, ಕಲ್ಲಂಗಡಿ ಹಣ್ಣುಗಳಿಗೆ ಮಾರುಹೋಗಿದ್ದಾರೆ.

ಕಳೆದ ಕೆಲವರ್ಷಗಳ ಹಿಂದೆ ಬೇಸಿಗೆಯಲ್ಲಿ ಮಡಿಕೇರಿಯ ತಾಪಮಾನ ಗರಿಷ್ಠ 22 ರಿಂದ 24 ಸೆಂಟಿಗ್ರೇಡ್. ಆದರೆ ಈಗ ಮಡಿಕೇರಿಯಲ್ಲಿ ಬರೋಬ್ಬರಿ 33, 35 ಡಿಗ್ರಿ ತಾಪಮಾನವಿರುತ್ತೆ. ತಮ್ಮೂರಿನ ಬೇಸಿಗೆಯಲ್ಲಿ ಬೆಂದು ಸುಸ್ತಾಗಿ ಮಡಿಕೇರಿಯ ಪ್ರಕೃತಿ ಮಡಿಲಲ್ಲಿ ತಂಪಾಗಿ ವಿಹರಿಸೋಕೆ ಬರೋ ಪ್ರವಾಸಿಗರು ಪೆಚ್ಚು ಮೋರೆ ಹಾಕಿಕೊಂಡು ಹೋಗೋ ಪರೀಸ್ಥಿತಿ ನಿರ್ಮಾಣವಾಗಿದೆ. ಫ್ಯಾನ್, ಎಸಿಯನ್ನೇ ನೋಡಿರದ ಮಡಿಕೇರಿ ಮಂದಿ ಅದಿಲ್ಲದೇ ಬದುಕಲು ಆಗುವುದಿಲ್ಲ ಅನ್ನುವಂತಾಗಿದೆ. ಛತ್ರಿ ಇಲ್ಲದೆ ಮನೆಯಿಂದ ಹೊರಗೆ ಬರೋದೇ ಕಷ್ಟವಾಗಿದೆ.

Comments

Leave a Reply

Your email address will not be published. Required fields are marked *