ಕೊಡಗಿನಲ್ಲಿ ಇಂದು ಒಂದೇ ದಿನ 15 ಮಂದಿಗೆ ಕೊರೊನಾ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು ಇಂದು ಒಂದೇ ದಿನ 15 ಮಂದಿಗೆ ಅಟ್ಯಾಕ್ ಮಾಡಿದೆ. ಜ್ವರ ಲಕ್ಷಣಗಳಿಂದ ಬಳಲುತ್ತಿದ್ದ 9 ಜನರನ್ನು ಪರಿಶೀಲಿಸಿದಾಗ ಡೆಡ್ಲಿ ವೈರಸ್ ವಕ್ಕರಿಸಿರುವುದು ಗೊತ್ತಾಗಿದೆ. ಸೋಮವಾರಪೇಟೆ ತಾಲೂಕಿನ 9 ಜನರಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ.

ನೀರುಗುಂದ ಗ್ರಾಮದ 36 ವರ್ಷದ ವ್ಯಕ್ತಿ, ಕಾರೆಕೊಪ್ಪ ಗ್ರಾಮದ 41 ವರ್ಷದ ಮಹಿಳೆ, ಕಕ್ಕೆಹೊಳೆ ಗ್ರಾಮದ 25 ವರ್ಷದ ಮಹಿಳೆ, ಗೋಪಾಲಪುರದ 25 ಯುವಕ, ಚೇರಳ ಶ್ರಿಮಂಗಲದ 62 ವರ್ಷದ ವೃದ್ಧನಿಗೂ ಕೊರೊನಾ ಅಟ್ಯಾಕ್ ಮಾಡಿದೆ. ಅಲ್ಲದೆ ಸುಂಟಿಕೊಪ್ಪದ 59 ವರ್ಷದ ವ್ಯಕ್ತಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕುಶಾಲನಗರ ಪಟ್ಟಣದ ಬೈಚನಹಳ್ಳಿ ಬಡಾವಣೆಯ 25 ವರ್ಷದ ಯುವಕ, ಕೋಣಮಾರಿಯಮ್ಮ ದೇವಸ್ಥಾನದ ಬಳಿಯ 56 ವರ್ಷದ ಮಹಿಳೆಗೂ ಕೊವಿಡ್ 19 ಇರುವುದು ದೃಢಪಟ್ಟಿದೆ. ಅರ್ವತೊಕ್ಲು ಗ್ರಾಮದ 18 ವರ್ಷದ ಯುವಕನಿಗೂ ಕೊರೊನ ಇರುವುದು ಪತ್ತೆಯಾಗಿದೆ. ಇವರೆಲ್ಲರೂ ಜ್ವರ ಲಕ್ಷಣದಿಂದ ಬಳಲುತ್ತಿದ್ದರು ಎಂದು ಜಿಲ್ಲಾಡಳಿತ ಹೇಳಿದೆ.

ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿಯ ಸೋಂಕಿತ ಆರೋಗ್ಯ ಕಾರ್ಯಕರ್ತನ ಪ್ರಾಥಮಿಕ ಸಂಪರ್ಕದಿಂದ ಆತನ 16 ವರ್ಷದ ಪುತ್ರನಿಗೂ ಸೋಂಕು ಹರಡಿದೆ. ಕುಶಾಲನಗರದ ಬಲಮುರಿ ದೇವಾಲಯದ ಬಳಿಯ 36 ವರ್ಷದ ವ್ಯಕ್ತಿಗೂ ಸೋಂಕು ಇರುವುದು ದೃಢಪಟ್ಟಿದೆ. ಜೊತೆಗೆ ಮಡಿಕೇರಿ ನಗರದ ಗದ್ದುಗೆ ಬಳಿ 28 ವರ್ಷದ ಯುವಕನಿಗೆ ಕೊರೊನಾ ಮಹಾಮಾರಿ ಹೆಗಲೇರಿರುವುದು ಗೊತ್ತಾಗಿದೆ.

ಒಟ್ಟಿನಲ್ಲಿ ಬೆಳಿಗ್ಗೆ ಬರೋಬ್ಬರಿ 10 ಜನರಿಗೆ ಅಟ್ಯಾಕ್ ಮಾಡಿದ್ದ ಕೊರೊನಾ ಮಧ್ಯಾಹ್ನದ ವೇಳೆಗೆ ಮತ್ತೆ ಐವರ ಹೇಗಲೇರಿದೆ. ಆಗಿರುವುದು ಒಟ್ಟಿನಲ್ಲಿ ಇದುವರೆಗೆ ಜಿಲ್ಲೆಯಲ್ಲಿ 184 ಜನರಿಗೆ ಕೊರೊನಾ ಸೋಂಕು ಹರಡಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

Comments

Leave a Reply

Your email address will not be published. Required fields are marked *