ಕೇರಳ ಬೆನ್ನಲ್ಲೇ ಮಹಾರಾಷ್ಟ್ರದಿಂದ ಬರೋರಿಗೆ ಲಗಾಮು – ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಕೊರೊನಾ ಎರಡನೇ ಅಲೆ ಆತಂಕದ ಹಿನ್ನೆಲೆ ನೆರೆಯ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆ.

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಇಳಿಮುಖ ಕಾಣುತ್ತಿದ್ದ ಕೊರೊನಾ ಹೆಮ್ಮಾರಿ ಮತ್ತೆ ವಿಜೃಂಭಿಸೋ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಮುಖ್ಯವಾಗಿ ಕೇರಳ, ಮಹಾರಾಷ್ಟ್ರದಲ್ಲಿ ಶೇಕಡಾ 75ರಷ್ಟು ಪ್ರಕರಣಗಳು ನಮೂದಾಗ್ತಿರೋದು ಆತಂಕದ ವಿಚಾರ. ಮಹಾರಾಷ್ಟ್ರ, ಕೇರಳದಲ್ಲಿ ಅಪಾಯಕಾರಿ ಬ್ರಿಟನ್ ವೈರಸ್ ಎಫ್484ಕೆ ಅತ್ಯಂತ ವೇಗವಾಗಿ ವ್ಯಾಪಿಸ್ತಿದೆ ಎಂದು ಸಿಸಿಎಂಬಿ ಕಳವಳ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಕರ್ನಾಟಕಕ್ಕೂ ಆತಂಕ ತಂದಿದೆ.

ಕೊರೊನಾ ಹೆಚ್ಚಿರುವ ರಾಜ್ಯಗಳಿಂದ ಬರುವ ಪ್ರಯಾಣಿಕರ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಬಗ್ಗೆ ಪಬ್ಲಿಕ್ ಟಿವಿಯ ರಿಯಾಲಿಟಿ ಚೆಕ್ ನಡೆಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ತು. ಕೇರಳ ಬೆನ್ನಲ್ಲೇ, ಮಹಾರಾಷ್ಟ್ರದಿಂದಲೂ ಬರುವ ಪ್ರಯಾಣಿಕರಿಗೆ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿತು. ನಾಳೆಯಿಂದಲೇ ಮಹಾರಾಷ್ಟ್ರದಿಂದ ಬರುವ ಎಲ್ಲರಿಗೂ ಕೋವಿಡ್ ರಿಪೋರ್ಟ್ ಕಡ್ಡಾಯ ಮಾಡಿ ಆದೇಶ ಹೊರಡಿಸಿತು.

ಕೋವಿಡ್ ತಡೆಗೆ ‘ಮಹಾ’ ಮಾರ್ಗಸೂಚಿ
* ಕರ್ನಾಟಕ ಎಂಟ್ರಿಗೆ ಕೋವಿಡ್ ನೆಗೆಟೀವ್ ಸರ್ಟಿಫಿಕೇಟ್ ಕಡ್ಡಾಯ.
* ಮಹಾರಾಷ್ಟ್ರದ ಪ್ರಯಾಣಿಕರ ಬಳಿ ಕೋವಿಡ್ ರಿಪೋರ್ಟ್ ಇದ್ದಲ್ಲಿ ಮಾತ್ರ ಬಸ್ ಟಿಕೆಟ್ .
* ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿದ್ರೆ, ರಿಪೋರ್ಟ್ ನೋಡಿ ಬಸ್ ಹತ್ತಿಸಬೇಕು.
* ರೈಲು ಪ್ರಯಾಣಿಕರ ಬಳಿ ನೆಗೆಟೀವ್ ರಿಪೋರ್ಟ್ ಇದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ.
* ವಿಮಾನ ಪ್ರಯಾಣಿಕರು ಆರ್ ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ಬರುವುದು ಕಡ್ಡಾಯ.
* ಸ್ವಂತ/ಬಾಡಿಗೆ ವಾಹನಗಳಲ್ಲಿ ಬರುವವರಿಗೆ ಟೋಲ್‍ಗೇಟ್‍ಗಳಲ್ಲಿ ರ‍್ಯಾಂಡಮ್ ಚೆಕ್‍ಅಪ್ ಕಡ್ಡಾಯ..
* ಮಹಾರಾಷ್ಟ್ರದಿಂದ ಬಂದವರಿಗೆ ಕೋವಿಡ್ ರಿಪೋರ್ಟ್ ಇದ್ದರಷ್ಟೇ, ಹೋಟೆಲ್, ಲಾಡ್ಜ್ ಗಳಲ್ಲಿ ರೂಂ.
* 2 ವಾರಗಳಲ್ಲಿ ಮಹಾರಾಷ್ಟ್ರದಿಂದ ಬಂದಿರುವ ವಿದ್ಯಾರ್ಥಿಗಳು, ಉದ್ಯಮಿಗಳು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು.
* ಹೋಟೆಲ್, ಶಿಕ್ಷಣ ಸಂಸ್ಥೆಗಳಲ್ಲಿ 5ಕ್ಕೂ ಹೆಚ್ಚು ಕೇಸ್ ಬಂದ್ರೆ, ಕಂಟೈನ್ಮೆಂಟ್ ಝೋನ್ ಎಂದು ಪರಿಗಣನೆ

Comments

Leave a Reply

Your email address will not be published. Required fields are marked *