ಕೆ.ಮಂಜು ಪುತ್ರ ಶ್ರೇಯಸ್ ನಟನೆಯ ಹೊಸ ಚಿತ್ರದ ಟೈಟಲ್ ಲಾಂಚ್

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕನ್ನಡ ಚಿತ್ರೋದ್ಯಮದ ಚಟುವಟಿಕೆಗಳು ಅನ್ ಲಾಕ್ ಬಳಿಕ ನಿಧಾನಗತಿಯಲ್ಲಿ ಗರಿಗೆದರುತ್ತಿವೆ. ಇಂದು ಬೆಳ್ಳಂಬೆಳಗ್ಗೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ನಟನೆಯ ರಾಣ ಚಿತ್ರದ ಟೈಟಲ್ ಲಾಂಚ್ ಹಾಗೂ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೇರವೇರಿದೆ.

ರಾಜಾಜಿನಗರದ ವರಸಿದ್ದಿ ಗಣಪತಿ ದೇವಸ್ಥಾನದಲ್ಲಿ ಶುಭ ಮೂಹೂರ್ತದಲ್ಲಿ ಪೂಜೆ ಕೈಂಕರ್ಯಗಳು ನೇರವೇರಿದ್ದು, ವಿಘ್ನವಿನಾಶಕನ ಸನ್ನಿಧಿಯಲ್ಲಿ ಚಿತ್ರ ತಂಡ ಟೈಟಲ್ ಲಾಂಚ್ ಮಾಡಿದೆ. ಕಾರ್ಯಕ್ರಮದಲ್ಲಿ ನಿರ್ಮಾಪಕ ಕೆ.ಮಂಜು, ನಟಿ ಗ್ರೀಷ್ಮಾ ನಾಣಯ್ಯ, ನಿರ್ದೇಶಕ ನಂದಕಿಶೋರ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಇದನ್ನೂ ಓದಿ: ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ವೈಷ್ಣವಿ ಜೊತೆ ಅರವಿಂದ್ ಮಾತು

ಪೊಗರು ಬಳಿಕ ರಾಣ ಸಿನಿಮಾಗೆ ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದು, ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪೊಗರು ಸಿನಿಮಾ ಬಳಿಕ ಮತ್ತೆ ರಾಣ ಚಿತ್ರದಲ್ಲಿ ಚಂದನ್ ಶೆಟ್ಟಿ ಹಾಗೂ ನಂದಕಿಶೋರ್  ಜೋಡಿ ಮೋಡಿ ಮಾಡಲು ರೆಡಿಯಾಗಿದೆ. ಇನ್ನು ರಾಣ ಚಿತ್ರದ ಮೂಲಕ ನಟ ಶ್ರೇಯಸ್ ಮಂಜು ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ಮಿಂಚಲು ತಯಾರಿ ನಡೆಸಿದ್ದು, ಇದೇ ತಿಂಗಳ ಕೊನೆ ವಾರದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.

Comments

Leave a Reply

Your email address will not be published. Required fields are marked *