ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯಡಿ ಆಕ್ಷನ್ ಪ್ರಿನ್ಸ್ `ಪೊಗರು’ ಗ್ರ್ಯಾಂಡ್ ರಿಲೀಸ್

 ಧ್ರುವ ಸರ್ಜಾ ಅಭಿನಯದ ಮೋಸ್ಟ್ ಎಕ್ಸ್‍ಪೆಕ್ಟೆಡ್ `ಪೊಗರು’ ಚಿತ್ರ ತೆರೆ ಮೇಲೆ ಭರ್ಜರಿ ಸೌಂಡ್ ಮಾಡೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ, ಇದೇ ತಿಂಗಳ 19ರಂದು ಅದ್ಧೂರಿಯಾಗಿ `ಪೊಗರು’ ಚಿತ್ರ ತೆರೆಕಾಣುತ್ತಿದೆ.

ಮೂರು ವರ್ಷಗಳ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ತೆರೆ ಮೇಲೆ ಬರುತ್ತಿದ್ದು ಧ್ರುವ ಅಭಿಮಾನಿಗಳ ಬಳಗ ಫುಲ್ ಸೆಲೆಬ್ರೇಷನ್ ಮೂಡ್‍ನಲ್ಲಿದೆ. ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ `ಪೊಗರು’ ಸಿನಿಮಾ ಹವಾ ಜೋರಾಗಿದ್ದು ಬಿಡುಗಡೆಯಾದ ಒಂದು ಹಾಡು ಎಲ್ಲಾ ದಾಖಲೆಗಳನ್ನೂ ಉಡೀಸ್ ಮಾಡಿದೆ. ಹೀಗೆ ಭರ್ಜರಿ ಸೌಂಡ್ ಮಾಡುತ್ತಿರುವ ಸಿನಿಮಾ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯಡಿ ಗ್ರ್ಯಾಂಡ್ ಆಗಿ ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಹೌದು, ಈ ನಡುವೆ ಗಾಂಧಿನಗರದ ಅಂಗಳದಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಸಖತ್ ಸದ್ದು ಮಾಡುತ್ತಿದೆ. ಒಂದೊಂದೇ ಸ್ಟಾರ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಕೆವಿಎನ್ ಪ್ರೊಡಕ್ಷನ್ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಇದೀಗ `ಪೊಗರು’ ಸಿನಿಮಾವನ್ನು ರಿಲೀಸ್ ಮಾಡುವ ಮೂಲಕ ಮತ್ತಷ್ಟು ಸುದ್ದಿಯಲ್ಲಿದೆ. ಸ್ಯಾಂಡಲ್‍ವುಡ್‍ನಿಂದ ಹಿಡಿದು ಟಾಲಿವುಡ್ ಅಂಗಳದಲ್ಲೂ ಅಬ್ಬರಿಸುತ್ತಿರುವ `ಪೊಗರು’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಿದೆ.

ಮೊದಲ ಬಾರಿ ಬಿಗ್ ಬಜೆಟ್ ಹಾಗೂ ಸ್ಟಾರ್ ಸಿನಿಮಾವೊಂದನ್ನ ಬಿಡುಗಡೆ ಮಾಡುವ ಮೂಲಕ ಮತ್ತಷ್ಟು ಖ್ಯಾತಿ ತನ್ನದಾಗಿಸಿಕೊಂಡಿದೆ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ. ಸಿನಿಮಾ ವಿತರಣೆ ಮಾತ್ರವಲ್ಲದೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿರುವ ಕೆವಿಎನ್ ಪ್ರೊಡಕ್ಷನ್ ನಟ ಧನ್ವೀರ್ ಅಭಿನಯದ ಬೈ2ಲವ್, ಬಂಪರ್, ಗೋಲ್ಡನ್ ಸ್ಟಾರ್ ಗಣೇಶ್ ಸಿಂಪಲ್ ಸುನಿ ಜೋಡಿಯ ಸಖತ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.

ನಂದಕಿಶೋರ್ ನಿರ್ದೇಶನದಲ್ಲಿ ಜಬರ್ದಸ್ತ್ ಆಗಿ ಮೂಡಿ ಬಂದಿರೋ `ಪೊಗರು’ ಚಿತ್ರದಲ್ಲಿ ಆಕ್ಷನ್ ಪ್ರಿನ್ಸ್ ಎರಡು ಶೇಡ್‍ನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಧ್ರುವ ಸರ್ಜಾಗೆ ಜೋಡಿಯಾಗಿದ್ದು ಟೀಸರ್ ಹಾಗೂ ಬಿಡುಗಡೆಯಾದ ಒಂದು ಹಾಡಿನ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡಿದೆ `ಪೊಗರು’ ಸಿನಿಮಾ.

Comments

Leave a Reply

Your email address will not be published. Required fields are marked *